ಹೋಶಿಯಾರ್ಪುರ(ಪಂಜಾಬ್) : 18 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಅಶ್ಲೀಲ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಇಲ್ಲಿನ ಪೊಲೀಸರು ಶನಿವಾರ ಬಂಧಿಸಿದ್ದಾರೆ.
22 ವರ್ಷದ ವಿಶಾಲ್ ಚೌಧರಿ ಬಂಧಿತ ಆರೋಪಿ. ಹೋಶಿಯಾರ್ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಕೆಲವು ತಿಂಗಳ ಹಿಂದೆ ಈತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಯುವತಿಗೆ ಸಾಮಾಜಿಕ ಮಾಧ್ಯಮದ ಮೂಲಕ ಆರೋಪಿಯ ಪರಿಚಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಕೆಲವು ತಿಂಗಳ ಹಿಂದೆ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡು ಅಮಲು ಪದಾರ್ಥ ಬೆರೆಸಿದ ತಂಪು ಪಾನೀಯ ನೀಡಿದ್ದಾನೆ. ಪ್ರಜ್ಞಾಹೀನಳಾದ ಆಕೆಯ ಮೇಲೆ ಅತ್ಯಾಚಾರ ಎಸಗಿ, ಅಶ್ಲೀಲ ವಿಡಿಯೊ ಚಿತ್ರೀಕರಿಸಿದ್ದಾನೆ. ಬಳಿಕ ಬ್ಲ್ಯಾಕ್ಮೇಲ್ ಕೂಡ ಮಾಡಿದ್ದ. ಅನಂತರ ಅಶ್ಲೀಲ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಎಂದೂ ಹೇಳಿದ್ದಾರೆ.