Categories: ದೇಶ

ಸಾವಿರಾರು ಮಂದಿ ಭಾಗಿಯಾಗಿದ್ದ ಮದುವೆಯಲ್ಲಿ ಪುರೋಹಿತರಿಗೆ ಅವಮಾನ; ವಿಡಿಯೋ ವೈರಲ್

ವೈರಲ್:‌ ಸಾವಿರಾರು ಮಂದಿ ಭಾಗಿಯಾಗಿದ್ದ ಮದುವೆಯಲ್ಲಿ ಪುರೋಹಿತರಿಗೆ ಮುಜುಗರ‌ ಉಂಟು ಮಾಡಿದ ಘಟನೆಯೊಂದು ವೈರಲ್‌ ಆಗಿದೆ. ಹೌದು. . ಪುರೋಹಿತರು ಇಲ್ಲದೆಯೇ ಮದುವೆ ಆಗುತ್ತಾ ಹೇಳಿ. ಆದರೆ ಇಲ್ಲಿ ಮದುವೆ ಶಾಸ್ತ್ರಗಳನ್ನು ಮಾಡಿಸಲು ಬಂದ ಪುರೋಹಿತರಿಗೆ ಯುವಕರು ಅವಮಾನ ಮಾಡಿದ್ದಾರೆ.

ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವೈರಲ್​ ಆದ ವಿಡಿಯೋದಲ್ಲಿ ಹೀಗೆ ಮದುವೆ ಮಾಡಿಸ್ತಿದ್ದ ಪುರೋಹಿತರ ತಲೆ ಮೇಲೆ ಕೆಲ ಯುವಕರು ಬ್ಯಾಗ್ ಹಾಕಿ ಅವಮಾನ ಮಾಡುತ್ತಾರೆ. ಏನೋ ಬಿಡು ಅಂತ ಪುರೋಹಿತರು ಸುಮನಾಗುತ್ತಾರೆ.

ಆದರೆ, ಮೇಲಿಂದ ಮೇಲಿಂದ ಪುರೋಹಿತರಿಗೆ ಯುವಕರು ಅವಮಾನಿಸುತ್ತಾರೆ. ಸಾವಿರಾರು ಜನರು ಇದ್ದ ಮದುವೆ ಮಂಟಪದಲ್ಲಿ ಹೀಗೆ ಪುರೋಹಿತರಿಗೆ ಯುವಕರು ಕ್ವಾಟ್ಲೆ ಕೊಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದಿದ್ದ ಪುರೋಹಿತರು, ನಾನು ಯಾವ ಮದುವೆನೂ ಮಾಡಿಸಲ್ಲ ಅಂತ ಅಲ್ಲಿಂದ ಹೊರಟು ಹೋಗಿದ್ದಾರೆ.

ಇದೇ ವಿಡಿಯೋವನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಪೂಜಾರಿಯೊಬ್ಬರಿಗೆ ಮಾಡಿದ ಈ ಅವಮಾನ ನೋಡಿ ಮನಸಿಗೆ ನೋವಾಗಿದೆ. ಅವರು ಶುಭ ಕಾರ್ಯವನ್ನು ಮಾಡುತ್ತಿರುವಾಗ ಜನರು ಹೇಗೆ ಮಾಡಿದ್ದಾರೆ ನೋಡಿ ಎಂದು ಬರೆದುಕೊಂಡಿದ್ದಾರೆ.

Ashitha S

Recent Posts

ಅಂಜಲಿ ಹತ್ಯೆ ಪ್ರಕರಣ : ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ ಚೇತರಿಕೆ

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ…

28 seconds ago

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ : ಬಿಜೆಪಿ ಮಾಜಿ ಸರಪಂಚ್ ಸಾವು

ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ…

11 mins ago

ವಿಮಾನ ಇಂಜಿನ್‌ನಲ್ಲಿ ಬೆಂಕಿ : ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ಎಕ್ಸಪ್ರೆಸ್‌ ವಿಮಾನವು ಶನಿವಾರ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದೆ.…

19 mins ago

ಸಿಂಗಾಪುರದಲ್ಲಿ ಹೆಚ್ಚುತ್ತಿರುವ ಕೊರೊನಾ ಅಲೆ ಭೀತಿ : ಮಾಸ್ಕ್‌ ಧರಿಸುವಂತೆ ಆದೇಶ

ಸಿಂಗಾಪುರದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ ಭೀತಿ ಎದುರಾಗಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜನರಿಗೆ ಮಾಸ್ಕ್‌…

21 mins ago

ಸುರತ್ಕಲ್: ಶಬರಿಮಲೆ ಹದಿನೆಂಟು ಮೆಟ್ಟಿಲು ಹತ್ತುವ ವೇಳೆ ಹೃದಯಾಘಾತ !

ಮಗನ ಹೆಸರಲ್ಲಿ ಹೇಳಿಕೊಂಡಿದ್ದ ಹರಕೆ ತೀರಿಸಲು ಶಬರಿಮಲೆಗೆ ತೆರಳಿದ್ದ ಸುರತ್ಕಲ್ ಕಾಟಿಪಳ್ಳ ನಿವಾಸಿ ಸಂದೀಪ್‌ ಶೆಟ್ಟಿ (37) ಅವರು ಹೃದಯಾಘಾತದಿಂದ…

33 mins ago

ಸಿಎಂ ಸಿದ್ದು ತವರು ಕ್ಷೇತ್ರದಲ್ಲಿ ವಾಂತಿ-ಬೇದಿಯಿಂದ ತತ್ತರಿಸಿದ ಗ್ರಾಮಸ್ಥರು ..!

ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಜನರಿಗೆ ತಂಪೆರೆಯುವ ಸಲುವಾಗಿ ಕಳೆದ ಒಂದು ವಾರಗಳಿಂದ ಮಳೆಯು ಧಾರಾಕಾರವಾಗಿ ಸುರಿಯುತ್ತಿದೆ ಇಂತಹ ಸಂದರ್ಭದಲ್ಲಿ ರಾಜ್ಯದ…

42 mins ago