ರಾಯಗಢ: ಮುಂಬೈ-ಪುಣೆ ಹೆದ್ದಾರಿಯಲ್ಲಿ ಖಾಸಗಿ ಬಸ್ಸೊಂದು ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 12 ಪ್ರಯಾಣಿಕರು ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆ-ಮುಂಬೈ ಹೆದ್ದಾರಿಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಬಸ್ ಬೋರ್ಘಾಟ್ ಪ್ರದೇಶದ ಬಳಿ ಕನಿಷ್ಠ 50 ಮೀಟರ್ ಕೆಳಗೆ ಕಂದಕಕ್ಕೆ ಬಿದ್ದಿದೆ ಎಂದು ವರದಿಯಾಗಿದೆ.
ಜಿಲ್ಲಾ ಅಧಿಕಾರಿಗಳ ಪ್ರಕಾರ, ಗಾಯಗೊಂಡವರನ್ನು ಖೋಪೊಲಿ ಸಿವಿಲ್ ಆಸ್ಪತ್ರೆ ಮತ್ತು ಜಕೋಟಿಯಾ ಆಸ್ಪತ್ರೆ ಮತ್ತು ನವೀ ಮುಂಬೈನ ಖಾಸಗಿ ಎಂಜಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ.
ಹೆಚ್ಚಿನ ಪ್ರಯಾಣಿಕರು ಗೋರೆಗಾಂವ್ನ ಬಾಜಿ ಪ್ರಭು ಮ್ಯೂಸಿಕ್ ಗ್ರೂಪ್ ಸದಸ್ಯರಾಗಿದ್ದು, ಶುಕ್ರವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಿ ಮನೆಗೆ ಮರಳುತ್ತಿದ್ದರು ಎಂದು ರಾಯಗಢ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.