ನವದೆಹಲಿ: ಪ್ರಧಾನಿ ಮೋದಿಯವರು ಇಂದು ಕಾರ್ತಿಕ ಪೂರ್ಣಿಮ ಮತ್ತು ದೇವ್ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಎಲ್ಲರಿಗೂ ಭಾರತೀಯ ಸಾಂಪ್ರದಯದ ಆಚರಣೆಯ ಭಾಗವಾದ ಕಾರ್ತಿಕ ಪೂರ್ಣಿಮ ಮತ್ತು ದೇವ್ ದೀಪಾವಳಿ ಹಬ್ಬದ ಶುಭಶಾಯಗಳು. ಈ ದಿನ ದೇಶದ ಎಲ್ಲಾ ನನ್ನ ಕುಟುಂಬ ಸದಸ್ಯರ ಜೀವನದಲ್ಲಿ ಹೊಸ ಬೆಳಕು ಹಾಗೂ ಚೈತನ್ಯ ತರಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಕಾರ್ತಿಕ ಪೂರ್ಣಿಮಾವನ್ನ ತ್ರಿಪುರಿ ಪೂರ್ಣಿಮಾ ಎಂದೂ ಕರೆಯುತ್ತಾರೆ. ನಂಬಿಕೆಗಳ ಪ್ರಕಾರ, ಈ ದಿನ ಶಿವನು ತ್ರಿಪುರಾಸುರನನ್ನು ಕೊಂದನು ಎನ್ನಲಾಗುತ್ತದೆ. ತ್ರಿಪುರಾಸುರನ ವಧೆಯಿಂದ ಸಂತಸಗೊಂಡ ದೇವತೆಗಳು ಕಾಶಿಯಲ್ಲಿ ಅನೇಕ ದೀಪಗಳನ್ನು ಬೆಳಗಿಸಿದರು. ಅದಕ್ಕಾಗಿಯೇ ಇದನ್ನು ದೇವ ದೀಪಾವಳಿ ಎಂದೂ ಕರೆಯುತ್ತಾರೆ.
श्रद्धा, भक्ति और दैवीय उपासना की भारतीय परंपरा से प्रकाशित पावन पर्व कार्तिक पूर्णिमा एवं देव दीपावली की असीम शुभकामनाएं। मेरी कामना है कि यह पावन अवसर देशभर के मेरे परिवारजनों के जीवन में नई रौनक और स्फूर्ति लेकर आए।
— Narendra Modi (@narendramodi) November 27, 2023