Categories: ಮಿಝೋರಾಂ

ಆಫ್ರಿಕನ್ ಹಂದಿ ಜ್ವರ ಭೀತಿ:ಹಂದಿಮಾಂಸ ಉತ್ಪನ್ನ ಆಮದನ್ನು ನಿಷೇಧಿಸಿದ ಮಿಜೋರಾಂ ಸರ್ಕಾರ

ಐಜ್ವಾಲ್: ಮಿಜೋರಾಂ ಸರ್ಕಾರ ಹಂದಿಗಳು ಮತ್ತು ಹಂದಿಮಾಂಸ ಉತ್ಪನ್ನಗಳ ಆಮದನ್ನು ಆಫ್ರಿಕನ್ ಹಂದಿ ಜ್ವರ ಹೊಸ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ  ನಿಷೇಧಿಸಿದೆ.

ಮುಂದಿನ ಆದೇಶದವರೆಗೆ ಇತರ ರಾಜ್ಯಗಳು ಮತ್ತು ಇತರ ದೇಶಗಳಿಂದ ಜೀವಂತ ಹಂದಿಗಳು, ತಾಜಾ ಹಂದಿಮಾಂಸ ಮತ್ತು ಹೆಪ್ಪುಗಟ್ಟಿದ ಹಂದಿಮಾಂಸ ಸೇರಿದಂತೆ ಎಲ್ಲಾ ರೀತಿಯ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಫ್ರಿಕನ್ ಹಂದಿ ಜ್ವರದ ನಿಯಂತ್ರಣ ಮತ್ತು ನಿರ್ಮೂಲನೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಗೆ ಅನುಗುಣವಾಗಿ ಹಂದಿಯ ಮೃತದೇಹವನ್ನು ಸುರಕ್ಷಿತ ವಿಲೇವಾರಿಯನ್ನು ಇಲಾಖೆ ಖಚಿತಪಡಿಸಬೇಕು ಎಂದು ಸೂಚಿಸಲಾಗಿದೆ.

ಹಂದಿ ಸಾಕಣಿಕೆ ಆವರಣದಲ್ಲಿ ಕಡ್ಡಾಯವಾಗಿ ಸೋಂಕು ನಿವಾರಣೆಯನ್ನು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ ಖಚಿತಪಡಿಸಬೇಕು. ಕಟ್ಟುನಿಟ್ಟಾದ ನೈರ್ಮಲ್ಯ ಕ್ರಮಗಳು ಮತ್ತು ಶಂಕಿತ ಹಂದಿಗಳನ್ನು ಪ್ರತ್ಯೇಕವಾಗಿರಿಸುವುದನ್ನು ಕಡ್ಡಾಯಗೊಳಸಲಾಗಿದೆ.

ಹಂದಿಗಳ ಅಸಾಮಾನ್ಯ ಮರಣದ ತಕ್ಷಣದ ವರದಿಗಾಗಿ ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ. ಹಂದಿಜ್ವರದ ಕಾರಣಕ್ಕೆ 2020 ರ ಆಗಸ್ಟ್‍ನಲ್ಲಿ ಮಾಂಸ ಹಾಗೂ ಮಾಂಸದ ಉತ್ಪನ್ನಗಳಿಗೆ ನಿಷೇಧ ಹೇರಲಾಗಿತ್ತು. ಕಳೆದ ವರ್ಷ ಡಿಸೆಂಬರ್‍ನಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗದ ಹಿನ್ನೆಲೆಯಲ್ಲಿ ಫೆಬ್ರವರಿ 1 ರಂದು 17 ತಿಂಗಳ ನಂತರ ಮಿಜೋರಾಂ ಸರ್ಕಾರ ನಿರ್ಬಂಧಗಳನ್ನು ತೆರವು ಮಾಡಿತ್ತು.

ಇತ್ತೀಚೆಗೆ ಐದು ಜಿಲ್ಲೆಗಳಲ್ಲಿ ಹೊಸದಾಗಿ 384 ಹಂದಿಗಳು ಅಸಹಜ ಸಾವಿಗೀಡಾಗಿವೆ. ಎಎಸ್‍ಎಫ್ ಕಳೆದ ವರ್ಷ ಮಾರ್ಚ್‍ನಿಂದ ನವೆಂಬರ್‍ವರೆಗೆ 33,417 ಹಂದಿಗಳನ್ನು ಬಲಿ ತೆಗೆದುಕೊಂಡಿದ್ದು, ಇದರಿಂದ 60.82 ಕೋಟಿ ರೂಪಾಯಿ ನಷ್ಟವಾಗಿದ್ದಾಗಿ ಅಂದಾಜಿಸಲಾಗಿದೆ. ರೋಗ ಹರಡುವುದನ್ನು ತಡೆಯಲು ಕಳೆದ ವರ್ಷ ಒಟ್ಟು 10,910 ಹಂದಿಗಳನ್ನು ಕೊಲ್ಲಲಾಗಿದೆ.

Swathi MG

Recent Posts

ಲೋಕಸಭೆ ಚುನಾವಣೆ ಮಹತ್ವ ಈಗ ಅರ್ಥವಾಗಿದೆ: ಸುನೀಲಗೌಡ

ಲೋಕಸಭೆ ಚುನಾವಣೆಯ ಮಹತ್ವವನ್ನು ನಮ್ಮ ಜನ ಅರಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಸುನೀಲಗೌಡ ಪಾಟೀಲ ಹೇಳಿದರು.

3 mins ago

ಸರಕು ತುಂಬಿದ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ: 6 ಮಂದಿ ಮೃತ್ಯು

ಸರಕು ತುಂಬಿದ ಲಾರಿಯೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿದ ಘಟನೆ ಬಿಹಾರದ ಭಾಗಲ್​ಪುರ್​​ದಲ್ಲಿ ನಡೆದಿದೆ.

21 mins ago

ಮಂಗಳೂರಿನಿಂದ ಬರುತ್ತಿದ್ದ ಲಾರಿಗೆ ಕಾರಿ ಡಿಕ್ಕಿ; ಒಂದೇ ಕುಟುಂಬದ ಐವರು ಮೃತ್ಯು.

ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ಕೇರಳದ ಕಣ್ಣೂರಿನಲ್ಲಿ ಸೋಮವಾರ…

23 mins ago

‘ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮʼ; ಕೋರ್ಟ್ ಮುಂದೆ ಸತ್ಯ ಒಪ್ಪಿಕೊಂಡ ಕಂಪನಿ

ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್​ ಮುಂದೆ ಒಪ್ಪಿಕೊಂಡಿದೆ.…

33 mins ago

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: ನಾವು ದೇಶದ ಮಾತೃಶಕ್ತಿ ಜೊತೆ ನಿಲ್ಲುತ್ತೇವೆ ಎಂದ ಅಮಿತ್ ಶಾ

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದು,…

40 mins ago

ಅಲೋಶಿಯಸ್ ನಲ್ಲಿ ಪರಿಸರ ಸುಸ್ಥಿರತೆಯ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ವತಿಯಿಂದ ಪರಿಸರ ಸುಸ್ಥಿರತೆಯ ಕುರಿತ "ಪ್ರಕೃತಿಯೊಂದಿಗೆ ಸಾಮರಸ್ಯ" (ICESHN-2024) ಎಂಬ…

57 mins ago