Categories: ಮಿಝೋರಾಂ

ಮಿಜೋರಾಂ ಮತ ಎಣಿಕೆ : 11 ಸ್ಥಾನಗಳಲ್ಲಿ ಝಡ್​ಪಿಎಂ ಮುನ್ನಡೆ

ಮಿಜೋರಾಂ: ಮಿಜೋರಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು,  11 ಸ್ಥಾನಗಳಲ್ಲಿ ಝಡ್​ಪಿಎಂ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.

ಎಕ್ಸಿಟ್ ಪೋಲ್ ಪ್ರಕಾರ ಕಳೆದ ಬಾರಿ 40 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದಿದ್ದ ಆಡಳಿತಾರೂಢ ಮಿಜೋ ನ್ಯಾಶನಲ್ ಫ್ರಂಟ್ ಈ ಬಾರಿ ಅರ್ಧದಷ್ಟನ್ನು ದಾಟಲು ಹೆಣಗಾಡುವುದಾಗಿ ಎಲ್ಲಾ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಅಂಚೆ ಮತಪತ್ರಗಳ ಲೆಕ್ಕಾಚಾರ ನಡೆಯುತ್ತಿದ್ದು, ಝಡ್​ಪಿಎಂ 11 ಸ್ಥಾನಗಳಲ್ಲಿ, ಮಿಜೋ ನ್ಯಾಷನಲ್ ಫ್ರಂಟ್ (MNF) 8 ಮತ್ತು ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಾರಿ ಮಿಜೋ ನ್ಯಾಷನಲ್ ಫ್ರಂಟ್ (MNF), ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ.

ಮತ ಎಣಿಕೆಗೂ ಮುನ್ನ ಹೊರಬಿದ್ದ ಬಹುತೇಕ ಎಕ್ಸಿಟ್ ಪೋಲ್ ಗಳು ಯಾವುದೇ ಪಕ್ಷಕ್ಕೆ ಬಹುಮತ ನೀಡಿಲ್ಲ. ಎಬಿಪಿ-ಸಿ ವೋಟರ್ ಎಕ್ಸಿಟ್ ಪೋಲ್ ಪ್ರಕಾರ, ಎಂಎನ್‌ಪಿ 15 ರಿಂದ 21 ಸ್ಥಾನಗಳನ್ನು, ಕಾಂಗ್ರೆಸ್ 2 ರಿಂದ 8, ಜಿಪಿಎಂ 12 ರಿಂದ 18 ಮತ್ತು ಇತರರು 0 ರಿಂದ 5 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

Ashika S

Recent Posts

ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ಮನೆಯಲ್ಲಿ ಅತಿಥಿ ಉಪನ್ಯಾಸಕಿಯೂಬ್ಬರು ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

2 mins ago

ಎಚ್​.ಡಿ. ರೇವಣ್ಣಗೆ ಇನ್ನೂ ಮೂರು ದಿನ ಜೈಲೇ ಗತಿ!

 ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಬಂಧಿತರಾಗಿರುವ ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ವಿಚಾರಣೆ…

2 mins ago

ಪ್ರಜ್ವಲ್ ಪೆನ್‍ಡ್ರೈವ್ ಕೇಸ್; ಸಂತ್ರಸ್ತೆಗೆ ಮೂವರಿಂದ ಬೆದರಿಕೆ

ಭಾರೀ ಕೋಲಾಹಲ ಎಬ್ಬಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರೆಂದು ಹೇಳಿಕೊಂಡು ಬಂದಿರುವ…

21 mins ago

ನೂರು ರೋಗಗಳಿಗೂ ಒಂದೇ ಔಷಧ ಪಾನೀಯ: ಎಳನೀರು

ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ  ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ.…

26 mins ago

ಪಟಾಕಿ ಘಟಕ ಸ್ಫೋಟಗೊಂಡು 8 ಕಾರ್ಮಿಕರು ಸಾವು !

ಇಂದು ತಮಿಳುನಾಡಿನ ಶಿವಕಾಶಿ ಸಮೀಪದ ಸೆಂಗಮಲಪಟ್ಟಿಯಲ್ಲಿರುವ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ.

30 mins ago

ಎಸ್‌ಎಸ್‌ಎಲ್‌ಸಿ ಫೇಲ್; ಮಂಡ್ಯದ ಬಾಲಕ ನೇಣಿಗೆ ಶರಣು, ವಿಷ ಸೇವಿಸಿದ ವಿದ್ಯಾರ್ಥಿನಿ

ರಾಜ್ಯಾದ್ಯಂತ ಇಂದು ಬೆಳಗ್ಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು…

37 mins ago