News Karnataka Kannada
Tuesday, April 30 2024
ದೇಶ

ಪಾರ್ಲೇ-ಜಿ ಬಿಸ್ಕೆಟ್​​​ನಲ್ಲಿ ಮೂಡಿದ ಅಯೋಧ್ಯೆ: ವಿಡಿಯೋ ವೈರಲ್‌

ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಈ ನಡುವೆ ರಾಮ ಭಕ್ತರು ತಮ್ಮ ಭಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ತೋರ್ಪಡಿಸುತ್ತಿರುವ ಸುದ್ದಿಗಳು ಹರಿದಾಡುತ್ತಿವೆ.
Photo Credit : News Kannada

ಪಶ್ಚಿಮ ಬಂಗಾಳ:  ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಈ ನಡುವೆ ರಾಮ ಭಕ್ತರು ತಮ್ಮ ಭಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ತೋರ್ಪಡಿಸುತ್ತಿರುವ ಸುದ್ದಿಗಳು ಹರಿದಾಡುತ್ತಿವೆ.

ಅದೇ ರೀತಿ ಪಶ್ಚಿಮ ಬಂಗಾಳದ ಯವಕನೊಬ್ಬ ಇದೀಗ ಬರೋಬ್ಬರಿ 20 ಕೆ.ಜಿ ಗಳಷ್ಟು ಪಾರ್ಲೆ-ಜಿ ಬಿಸ್ಕೆಟ್ ಬಳಸಿಕೊಂಡು ಅದರಿಂದ ಅದ್ಭುತವಾದ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಿದ್ದಾರೆ. ಇದರ ವಿಡಿಯೋ ಸಕತ್‌ ವೈರಲ್‌ ಆಗ್ತಿದೆ.

ರಾಮ ಮಂದಿರ ಪ್ರತಿಕೃತಿಯನ್ನು ರಚಿಸಲು ಛೋಟಾನ್ ಘೋಷ್ ಬರೋಬ್ಬರಿ 20 ಕೆ.ಜಿ ಪಾರ್ಲೆ ಜಿ ಬಿಸ್ಕಿಟ್ಗಳನ್ನು ಬಳಸಿದ್ದು, 4-4 ಅಡಿ ಎತ್ತರದ ಈ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಲು ಛೋಟಾನ್ ಘೋಷ್ ಮತ್ತು ಆತನ ಸ್ನೇಹಿತರು ಐದು ದಿನಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ಈ ಪ್ರತಿಕೃತಿಯನ್ನು ರಚಿಸಲು ಬಿಸ್ಕೆಟ್ ಜೊತೆಗೆ ಥರ್ಮಕೋಲ್, ಪ್ಲೈವುಡ್ ಮತ್ತು ಗಮ್​​​​​ಗಳನ್ನು ಸಹ ಬಳಸಿದ್ದಾರೆ.

@durgapur_times ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 20 ಕೆ.ಜಿ ಬಿಸ್ಕೆಟ್​​​ಗಳನ್ನು ಬಳಸಿ ತಯಾರಿಸಿದಂತಹ ರಾಮ ಮಂದಿರ ಪ್ರತಿಕೃತಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ನೆಟ್ಟಿಗರು ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು