News Karnataka Kannada
Monday, April 29 2024
ದೇಶ

ವಿಮಾನದಲ್ಲಿ ಮಹಿಳೆಯಿಂದ ವ್ಯಕ್ತಿಗೆ ಲೈಂಗಿಕ ಕಿರುಕುಳ

Dhli
Photo Credit : News Kannada

ದೆಹಲಿ: ವಿಮಾನದಲ್ಲಿ ಮಹಿಳೆಯರ ಮೇಲೆ ಸಹ ಪ್ರಯಾಣಿಕರ ಲೈಂಗಿಕ ದೌರ್ಜನ್ಯವೆಸಗುವ, ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಕಡೆ ಪುರುಷನೋರ್ವ ತನಗೆ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಿದ್ದು, ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾನೆ.

ನವೆಂಬರ್‌ 7 ರಂದು ದೆಹಲಿಯಿಂದ ಪುಣೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಆತ ಅಳಲು ತೋಡಿಕೊಂಡಿದ್ದಾನೆ. ವಿಮಾನ ಹತ್ತಲು ಕಾಯುತ್ತಿದ್ದ ವೇಳೆ ಮಧ್ಯವಯಸ್ಸಿನ ಮಹಿಳೆಯೊಬ್ಬಳು, ತನ್ನ ಹಿಂದೆ ನಿಂತುಕೊಂಡು ಹಾಡು ಹಾಡಲು ಶುರು ಮಾಡಿದ್ದಲ್ಲದೇ ಕೆಳ ಸೊಂಟ ಹಾಗೂ ಹಿಂಭಾಗವನ್ನು ಅಸಭ್ಯವಾಗಿ ಸ್ಪರ್ಶಿಸಿದಳು. ಈಕೆಯ ವರ್ತನೆಯಿಂದ ತಾನು ಗೊಂದಲಕ್ಕೊಳಗಾಗುವುದರ ಜೊತೆ ಒಂತರ ಕಿರಿಕಿರಿ ಉಂಟಾಯ್ತು. ಈ ಹಿಂದೆದೂ ತನಗೆ ಇಂತಹ ಅನುಭವ ಆಗಿರಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ.

ಮಹಿಳೆಯ ವರ್ತನೆಯನ್ನು ತನಗೆ ಅರ್ಥ ಮಾಡಿಕೊಳ್ಳಲಾಗಲಿಲ್ಲ, ಆದರೂ ನಾನು ವಿಮಾನ ಲ್ಯಾಂಡ್ ಆದ ಮೇಲೆ ಆಕೆಯನ್ನು ವಿಚಾರಿಸಿಕೊಳ್ಳಲು ನಿರ್ಧರಿಸಿದೆ. ಆದರೆ ಆಕೆ ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದಳು ಎಂದು ಆತ ರೆಡಿಟ್‌ನಲ್ಲಿ ಬರೆದುಕೊಂಡಿದ್ದಾನೆ. ಈ ಪೋಸ್ಟ್ ರೆಡಿಟ್‌ನಲ್ಲಿ ವೈರಲ್ ಆಗಿದ್ದು, ಕೆಲವರು ಈತನ ಹೇಳಿಕೆಯನ್ನು ಒಪ್ಪಲು ಸಿದ್ದವಿಲ್ಲದೇ ಈತ ಕತೆ ಕಟ್ತಿರಬಹುದು ಎಂದು ಊಹಿಸಿದ್ದಾರೆ.  ಆದರೆ ಮತ್ತೆ ಕೆಲವರು ಆತನನ್ನು ಬೆಂಬಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು