ಚಂಡೀಗಢ: ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ಹಿಮಾಚಲ ಪ್ರದೇಶದ ಗಿರಿಧಾಮಗಳಿಗೆ ಅಪಾರ ಸಂಖ್ಯೆಯ ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ. ಹೀಗಾಗಿ, ಹಿಮಾಚಲ ಪ್ರದೇಶದ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
ಟ್ರಾಫಿಕ್ ಜಾಮ್ನಿಂದ ಪಾರಾಗಲು ಕೆಲ ಪ್ರವಾಸಿಗರು ಅಡ್ಡ ಮಾರ್ಗ ಶೋಧಿಸಿದ್ದಾರೆ. ಮುಂದೆ ಸಾಗಲು ತಮ್ಮ ವಾಹನಗಳನ್ನು ನದಿಯಲ್ಲಿಯೇ ಓಡಿಸುವ ಅಪಾಯಕಾರಿ ಸಾಹಸಕ್ಕೆ ಕೈಹಾಕಿದ್ದಾರೆ.
ಲಾಹೌಲ್ ಕಣಿವೆಯ ಚಂದ್ರ ನದಿಯ ಮೂಲಕ ಮಹೀಂದ್ರಾ ಥಾರ್ ಎಸ್ಯುವಿ ಓಡಿಸಿಕೊಂಡು ಪ್ರವಾಸಿಗರು ಮುಂದೆ ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್, ನದಿಯಲ್ಲಿನ ನೀರಿನ ಮಟ್ಟವು ಹೆಚ್ಚಿರಲಿಲ್ಲ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸ್ಥಳೀಯರಿಂದ ಇದಕ್ಕೆ ಟೀಕೆ ವ್ಯಕ್ತವಾಗಿದೆ
"Outrageous scene near Sissu in Himachal as a tourist brazenly drives into the Chandra river, displaying a shocking disregard for the fragile ecosystem. To all visitors: these areas aren't a playground for your antics! Urgent call to @himachalpolice and the government to crack… pic.twitter.com/406ZGWAwPd
— Nikhil saini (@iNikhilsaini) December 24, 2023