News Karnataka Kannada
Thursday, May 02 2024
ಮಹಾರಾಷ್ಟ್ರ

ನಟಿ ಸಮಂತಾ ಹಂಚಿಕೊಂಡ ಫೋಟೋ ಆ ಪರಿ ವೈರಲ್‌ ಆಗಿದ್ದೇಕೆ?

Why did the photo shared by actress Samantha go viral?
Photo Credit : News Kannada

ಮುಂಬೈ: ಮಯೋಸೈಟಿಸ್​ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ ಅವರು ಹಂಚಿಕೊಂಡಿರುವ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮಯೋಸೈಟಿಸ್​ ಕಾಯಿಲೆಯಿಂದ ಗುಣವಾಗಲು ಅವರು ಹಲವು ಬಗೆಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಕ್ರಯೋಥೆರಪಿ ಕೂಡ ಒಂದು. ಬೇರೆ ಎಲ್ಲ ಚಿಕಿತ್ಸಾ ವಿಧಾನಗಳಿಗಿಂತಲೂ ಇದು ತುಂಬ ಭಿನ್ನವಾಗಿದೆ. ಇದರಿಂದ ಸಮಂತಾ ಅವರು ಆದಷ್ಟು ಬೇಗ ಚೇತರಿಕೆ ಕಾಣುವ ಸಾಧ್ಯತೆ ಇದೆ. ಮೊದಲಿನಂತೆ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಸೂಕ್ತ ವಿಧಾನದ ಮೂಲಕ ಒಂದು ನಿರ್ದಿಷ್ಟ ಸಮಯದವರೆಗೆ ದೇಹವನ್ನು ಅತಿಯಾದ ಶೀತದ ವಾತಾವರಣಕ್ಕೆ ಒಡ್ಡುವ ಪ್ರಕ್ರಿಯೆಯೇ ಕ್ರಯೋಥೆರಪಿ. ಇದರಿಂದ ಹಲವು ಅನುಕೂಲತೆ ಇದೆ. ಇದರಿಂದ ರಕ್ತ ಸಂಚಾರ ಸರಾಗವಾಗುತ್ತದೆ. ದೇಹದ ಸಹಿಷ್ಠು ಶಕ್ತಿ ಹೆಚ್ಚುತ್ತದೆ. ಅಗತ್ಯ ಇರುವ ಹಾರ್ಮೋನ್​ಗಳ ವೃದ್ಧಿಗೂ ಇದು ಸಹಕಾರಿ ಆಗಿದೆ. ಚರ್ಮದಲ್ಲಿ ಇರುವ ಡೆಡ್​ ಸೆಲ್​ಗಳನ್ನು ತೆಗೆದು ಹಾಕಲು ಕೂಡ ಈ ಚಿಕಿತ್ಸಾ ವಿಧಾನವನ್ನು ಬಳಸುತ್ತಾರೆ. ‘ರಿಕವರಿ’ ಎಂಬ ಕ್ಯಾಪ್ಷನ್​ನೊಂದಿಗೆ ಸಮಂತಾ ರುತ್​ ಪ್ರಭು ಅವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು