ಮುಂಬೈ: ಮಹಾರಾಷ್ಟ್ರದ ಬುಲ್ಧಾನಾದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.
ಮಲ್ಕಾಪುರ ಪ್ರದೇಶದ ನಂದೂರ್ ನಾಕಾ ಮೇಲ್ಸೇತುವೆಯಲ್ಲಿ ಎನ್ಎಚ್ 53 ರಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಎರಡು ಬಸ್ಗಳು ಮುಖಾಮುಖಿ ಡಿಕ್ಕಿಯಾಗಿವೆ. ಬಾಲಾಜಿ ಟ್ರಾವೆಲ್ಸ್ ಹೆಸರಿನ ಕಂಪನಿಯ ಒಡೆತನದ ಬಸ್ಗಳಲ್ಲಿ ಒಂದು ಅಮರನಾಥ ಯಾತ್ರೆಯಿಂದ ಹಿಂಗೋಲಿ ಜಿಲ್ಲೆಗೆ ಮರಳುತ್ತಿದ್ದರೆ, ಇನ್ನೊಂದು ರಾಯಲ್ ಟ್ರಾವೆಲ್ಸ್ ಕಂಪನಿಯ ಮಾಲೀಕತ್ವದ ನಾಸಿಕ್ಗೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂದೂರ್ ನಾಕಾದಲ್ಲಿ ಒಂದು ಬಸ್ ಇನ್ನೊಂದನ್ನು ಹಿಂದಿಕ್ಕಿತು, ನಂತರ ಎರಡು ಡಿಕ್ಕಿ ಹೊಡೆದವು. ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ ಸುಮಾರು 20 ಮಂದಿಯನ್ನು ಬುಲ್ಧಾನಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳಾಗಿರುವ 32 ಪ್ರಯಾಣಿಕರಿಗೆ ಸಮೀಪದ ಗುರುದ್ವಾರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.