ನಾಗ್ಪುರ: ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಆರು ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದ ಹೊರವಲಯದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಟೋಲ್-ಕಲ್ಮೇಶ್ವರ ರಸ್ತೆಯ ಸೋನ್ಖಾಂಬ್ ಗ್ರಾಮದ ಬಳಿ ಮಧ್ಯರಾತ್ರಿ 12.15 ರಿಂದ 2 ಗಂಟೆಯ ನಡುವೆ ಭೀಕರ ಅಪಘಾತ ನಡೆದಿದೆ.
ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ ಆಗುತ್ತಿದ್ದಾಗ ಕಾರು ಸೋಯಾಬೀನ್ ಸಾಗಿಸುತ್ತಿದ್ದ ಟ್ರಕ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ’ ಎಂದು ತಿಳಿದಿದೆ.