ಮುಂಬೈ: ಪಾಲ್ಗರ್ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
2021ರ ಜುಲೈನಲ್ಲಿ ಝಿಕಾ ವೈರಸ್ ಮೊದಲ ಪ್ರಕರಣ ಪುಣೆಯಲ್ಲಿ ವರದಿಯಾಗಿತ್ತು. ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಹರಡುವ ಝಿಕಾ ವೈರಸ್ ಸೋಂಕು, ರಾಜ್ಯದಲ್ಲಿ ವರ್ಷದ ನಂತರ ಕಾಣಿಸಿಕೊಂಡಿದೆ.
‘ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಝಿಕಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಲಕಿಯಲ್ಲಿ ಬೇರೆ ಯಾವುದೇ ಲಕ್ಷಣಗಳು ಕಾಣಿಸಿಲ್ಲ. ಬಾಲಕಿ ಈಗ ಆರೋಗ್ಯವಾಗಿದ್ದಾರೆ’ ಎಂದು ರಾಜ್ಯ ಆರೋಗ್ಯ ಸರ್ವೇಕ್ಷಣಾಧಿಕಾರಿ ಅಧಿಕಾರಿ ಪ್ರದೀಪ್ ಆವಟೆ ತಿಳಿಸಿದ್ದಾರೆ.