News Karnataka Kannada
Thursday, May 09 2024
ಮಹಾರಾಷ್ಟ್ರ

ಸಹರಾ ಇಂಡಿಯಾ ಗ್ರೂಪ್‌ ಮುಖ್ಯಸ್ಥ ಸುಬ್ರತಾ ರಾಯ್ ನಿಧನ

Sahara India Group chairman Subrata Roy passes away
Photo Credit : News Kannada

ಮುಂಬೈ: ಸಹಾರಾ ಇಂಡಿಯಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಮಂಗಳವಾರ ನಿಧನರಾದರು. 75 ವರ್ಷದ ಸುಬ್ರತಾ ರಾಯ್ ಅವರು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಹಾರಾ ಕುಟುಂಬದ ಮುಖ್ಯಸ್ಥ ಸುಬ್ರತಾ ರಾಯ್ ಬಹಳ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸುಬ್ರತಾ ರಾಯ್ ಅವರು 1948ರ ಜೂನ್ 10ರಂದು ಜನಿಸಿದರು. ಭಾರತದ ಪ್ರಮುಖ ಉದ್ಯಮಿ ಮತ್ತು ಸಹಾರಾ ಇಂಡಿಯಾ ಪರಿವಾರದ ಸಂಸ್ಥಾಪಕರಾಗಿದ್ದರು. ಅವರನ್ನು ನಾಡಿನಾದ್ಯಂತ ‘ಸಹರಾಶ್ರೀ’ ಎಂದೂ ಕರೆಯಲಾಗುತ್ತಿತ್ತು.
ಸುಬ್ರತಾ ರಾಯ್ ನಿಧನಕ್ಕೆ ಸಮಾಜವಾದಿ ಪಕ್ಷ ಸಂತಾಪ ವ್ಯಕ್ತಪಡಿಸಿದ್ದು, ಸುಬ್ರತಾ ರಾಯ್ ಜಿ ಅವರ ನಿಧನದಿಂದ ದುಃಖವಾಗಿದೆ ಎಂದು ಹೇಳಿದೆ. ಅವರ ಆತ್ಮಕೆ ಶಾಂತಿ ಸಿಗಲಿ. ಮೃತರ ಕುಟುಂಬದ ಸದಸ್ಯರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿ ಸಿಗಲಿ. ಭಾವಪೂರ್ಣ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡಿದೆ.

ಹಲವು ವರ್ಷಗಳಿಂದ ಜನರ ಹಣವನ್ನು ಪಾವತಿಸದ ಸಹಾರಾ ಇಂಡಿಯಾ ವಿರುದ್ಧ ಪಾಟ್ನಾ ಹೈಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಜನರು ಈ ಹಣವನ್ನು ಕಂಪನಿಯ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರು. ಆದರೆ ನಂತರ ಸುಬ್ರತಾ ರಾಯ್ ಗೆ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು