News Karnataka Kannada
Monday, April 29 2024
ಮಹಾರಾಷ್ಟ್ರ

2,200 ಕೋಟಿ ರೂ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದುಕೊಂಡ ಪೊಲೀಸರು

2,200 ಕೋಟಿ ರೂಪಾಯಿ ಮೌಲ್ಯದ 1,100 ಕೆ.ಜಿ ತೂಕದ ಮಾದಕ ವಸ್ತುವಾದ ಮೆಫಡ್ರೋನ್ ಅನ್ನು ಮಹಾರಾಷ್ಟ್ರದ ಪುಣೆಯ ಕುರ್ಕುಂಭ್‌ನ ಗೋಡೌನ್​ವೊಂದರಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Photo Credit : News Kannada

ಮುಂಬೈ: 2,200 ಕೋಟಿ ರೂಪಾಯಿ ಮೌಲ್ಯದ 1,100 ಕೆ.ಜಿ ತೂಕದ ಮಾದಕ ವಸ್ತುವಾದ ಮೆಫಡ್ರೋನ್ ಅನ್ನು ಮಹಾರಾಷ್ಟ್ರದ ಪುಣೆಯ ಕುರ್ಕುಂಭ್‌ನ ಗೋಡೌನ್​ವೊಂದರಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಐವರನ್ನು ಅರೆಸ್ಟ್ ಮಾಡಿದ್ದಾರೆ. ಪುಣೆಯ ಅರ್ಥ್ ಕೆಮ್ ಪ್ರೈವೇಟ್ ಲಿಮಿಟೆಡ್ ಫಾರ್ಮಾ ಪ್ಲಾಂಟ್‌ನಿಂದ 1,400 ಕೋಟಿ ರೂಪಾಯಿ ಮೌಲ್ಯದ 700 ಕೆಜಿ ಎಂಡಿ ಮತ್ತು ದೆಹಲಿಯಲ್ಲಿ 800 ಕೋಟಿ ಮೌಲ್ಯದ 400 ಕೆಜಿ ಸಿಂಥೆಟಿಕ್ ಡ್ರಗ್ ಅನ್ನು ವಶಪಡಿಸಿಕೊಂಡಿದ್ದಾರೆ.

ಫಾರ್ಮಾ ಪ್ಲಾಂಟ್‌ನ ಮಾಲೀಕ ಭೀಮಾಜಿ ಅಲಿಯಾಸ್ ಅನಿಲ್ ಪರಶುರಾಮ್ ಸಬ್ಲೆ, ಇಂಜಿನೀಯರ್ ಯುವರಾಜ್ ಬಬನ್ ಭುಜಬಲ್ ಸೇರಿ ಐವರನ್ನು ಬಂಧಿಸಲಾಗಿದೆ.

ಇನ್ನು ಈ ಸಂಬಂಧ ಮಾತನಾಡಿದ ಪೊಲೀಸ್ ಅಧಿಕಾಯೊಬ್ಬರು, ಅರೆಸ್ಟ್ ಮಾಡಿದ್ದೇವೆ. ಇನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿಯಲ್ಲಿ ಎಂಡಿ ಉತ್ಪಾದನೆ ಮತ್ತು ವ್ಯಾಪಾರ ಮಾಡುವುದನ್ನ ನಿಷೇಧ ಮಾಡಲಾಗಿದೆ. ಎರಡೂ ಸ್ಥಳಗಳಲ್ಲಿ ಕ್ರಿಸ್ಟಲ್ ರೂಪದಲ್ಲಿ ಸಿಂಥೆಟಿಕ್ ಔಷಧ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು