ಮುಖೇಶ್​​ ಅಂಬಾನಿಯ ಮನೆ ಮೇಲೂ ಜೈ ಶ್ರೀರಾಮ್​ ಘೋಷಣೆ​

ಮುಂಬೈ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ರಾಮ ನಾಮ ಸ್ಮರಣೆಯೊಂದಿಗೆ ನಾಳೆ ಸೂರ್ಯೋದಯ ಆಗಲಿದೆ. ರಾಮ ಭಕ್ತಿ ಸಾಗರದ ಸೆಲೆ ಆಗಿರುವ ರಾಮನೂರಿನಲ್ಲಿ ರಾಮನ ಮೇಲಿನ ಭಕ್ತಿ ಜೊತೆಗೆ ಪ್ರತಿ ಹಂತದಲ್ಲೂ ರಕ್ಷಣೆಯ ಶಕ್ತಿ ಮಿಳಿತಗೊಂಡಿದೆ.

ಹೌದು. . ನಾಳೆ ಮನೆ ಮನೆಗಳಲ್ಲೂ ಸಹ ದೀಪವನ್ನು ಬೆಳಗಿಸುವ ಮೂಲಕ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ನಗರದ ಜನತೆ ಸಜ್ಜಾಗಿದ್ದಾರೆ. ಇದರ ಜೊತೆಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿರೋ ಮುಕೇಶ್ ಅಂಬಾನಿ ಅವರ ಮನೆ ‘ಆಂಟಿಲಿಯಾ’ ಮೇಲೆ ಜೈ ಶ್ರೀರಾಮ ಎಂದು ಬರೆಯಲಾಗಿದೆ.

ಈಗಾಗಲೇ ನಗರದ ಬಹುತೇಕ ರಸ್ತೆ ಹಾಗೂ ವೃತ್ತಗಳಲ್ಲಿ ಫ್ಲೆಕ್ಸ್, ಬ್ಯಾನರ್​ಗಳು, ತಳಿರು ತೋರಣ ಹಾಗೂ ಮನೆಗಳ ಮೇಲೆ ಶ್ರೀರಾಮನ ಭಾವಚಿತ್ರವುಳ್ಳ ಧ್ವಜವನ್ನು ಹಾರಿಸಲಾಗಿದೆ. ಈಗ ಮುಕೇಶ್ ಅಂಬಾನಿ ಅವರ ಮನೆ ‘ಆಂಟಿಲಿಯಾ’ ಮೇಲೆ ಜೈ ಶ್ರೀರಾಮ ಎಂದು ಬರೆದಿದ್ದು ವಿಶೇಷವಾಗಿದೆ.

ಇನ್ನೂ ಅಯೋಧ್ಯೆಯ ರಾಮಮಂದಿರದಲ್ಲಿ ರಾಮ ಲಲ್ಲಾನ ಪ್ರತಿಷ್ಠಾಪನೆ ಸಮಾರಂಭಕ್ಕೆ ಭಾರತೀಯ ಉದ್ಯಮದ ಜನರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಎಂಡಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಸ್ಥರಿಗೆ ಆಹ್ವಾನಿಸಲಾಗಿದೆ. ಇವರ ಜೊತೆಗೆ ಪ್ರಸಿದ್ಧ ಭಾರತೀಯ ಉದ್ಯಮಿ ರತನ್ ಟಾಟಾ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರಿಗೂ ಕೂಡ ಆಹ್ವಾನ ನೀಡಲಾಗಿದೆ.

Ashika S

Recent Posts

ಸುನೀತಾ ವಿಲಿಯಮ್ಸ್‌ ಗಗನಯಾತ್ರೆ ಮತ್ತೆ ಸ್ಥಗಿತ : ಮೇ 17ಕ್ಕೆ ಮುಂದೂಡಿಕೆ

ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಕೈಗೊಂಡಿರುವ ಗಗನಯಾತ್ರೆಯನ್ನು ಮತ್ತೆ ಮುಂದೂಡಲಾಗಿದೆ

5 mins ago

ನ್ಯೂಸ್ ಕರ್ನಾಟಕ ವರದಿಯ ಫಲಶೃತಿ : ಗೋಳೂರು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ತಾಲ್ಲೂಕಿನ ಗೋಳೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿ ಅವ್ಯವಸ್ಥೆಯ ಬಗ್ಗೆ ನ್ಯೂಸ್ ಕರ್ನಾಟಕ ವಾಹಿನಿಯಲ್ಲಿ ಸುದ್ದಿಯನ್ನು ಪ್ರಸಾರ…

18 mins ago

ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು

ಮೊಬೈಲ್‌ ನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿರುವ ಅಹಿತಕರ ಘಟನೆ…

44 mins ago

ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಏನು ?

ಸೋಷಿಯಲ್‌ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್‌ ಮಾಡುತ್ತ, ಹಲ್‌ಚಲ್‌ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ…

57 mins ago

ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಅಪ್

ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್‌ ಲೀಕ್ ಆಗಿ ರಸ್ತೆಯ…

1 hour ago

ಮಲ್ಪೆಯಲ್ಲಿ ಸಮುದ್ರದ ಅಲೆಗಳ ಆರ್ಭಟ ಹೆಚ್ಚಳ : ವಾಟರ್ ಸ್ಪೋರ್ಟ್ಸ್ ಸ್ಥಗಿತ

ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮುಂದಿನ ಆದೇಶದವರೆಗೆ ಮಲ್ಪೆಯಲ್ಲಿ ಎಲ್ಲ ರೀತಿಯ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲಾಗಿದೆ.

1 hour ago