News Karnataka Kannada
Monday, April 29 2024
ಮಹಾರಾಷ್ಟ್ರ

ಇಸ್ರೋ ಅಧ್ಯಕ್ಷರಿಗೆ ಇಂಡಿಗೋ ವಿಮಾನದಲ್ಲಿ ಅಚ್ಚರಿಯ ಸ್ವಾಗತ: ವಿಡಿಯೋ ನೋಡಿ

ISRO chairman gets surprise welcome on IndiGo flight: Watch video
Photo Credit : IANS

ಮುಂಬೈ: ಚಂದ್ರಯಾನ-3 ರ ಯಶಸ್ಸು ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಬೆಳಗುವಂತೆ ಮಾಡಿದೆ. ಈ ಆಗಾಧ ಸಾಧನೆಯ ಹಿಂದಿರುವ ಶಕ್ತಿಯಾಗಿ ಕೆಲಸ ಮಾಡಿರುವ ಶ್ರೇಯಸ್ಸು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರ ತಂಡಕ್ಕೆ ಸಲ್ಲುತ್ತದೆ. ಅಂತಹ ತಂಡಸ್ಪೂರ್ತಿಯ ವ್ಯಕ್ತಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿರುವ ವೇಳೆ ಕ್ಯಾಬಿನ್‌ ಸಿಬ್ಬಂದಿ, ಪ್ರಯಾಣಿಕರಿಂದ ಅಭೂತಪೂರ್ವ ಸ್ವಾಗತ ಪಡೆದ ವಿಡಿಯೋವೊಂದು ಈಗ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಇಸ್ರೋ ಅಧ್ಯಕ್ಷ ಸೋಮನಾಥ್‌ ಅವರನ್ನು ಗಗನಸಖಿ ಸ್ವಾಗತಿಸುತ್ತಾರೆ. ಅಲ್ಲದೆ “ರಾಷ್ಟ್ರೀಯ ವೀರ”( ನ್ಯಾಷನಲ್‌ ಹೀರೋ) ಇಂದು ನಮ್ಮ ವಿಮಾನವನ್ನು ಏರಿದ್ದು, ಅವರಿಗೆ ಪ್ರಯಾಣಿಕರೆಲ್ಲರೂ ಸ್ವಾಗತಿಸಬೇಕೆಂದು ಕೇಳಿಕೊಳ್ಳುತ್ತಾರೆ. ಈ ವೇಳೆ ವಿಮಾನ ಪ್ರಯಾಣಿಕರೆಲ್ಲರೂ ಸೋಮನಾಥ್‌ ಕಡೆಗೆ ತಿರುಗಿ ಕೃತಜ್ಞತೆ ಸಲ್ಲಿಸಿ ಜೋರಾಗಿ ಚಪ್ಪಾಳೆ ತಟ್ಟುವುದು ವಿಡಿಯೋದಲ್ಲಿದೆ.

ಅಲ್ಲದೆ ಹಿನ್ನಲೆ ಧ್ವನಿಯಲ್ಲಿ ವಂದೇ ಮಾತರಂ ಮೊಳಗುತ್ತದೆ. ನಂತರ ಮತ್ತೊಬ್ಬ ಫ್ಲೈಟ್ ಅಟೆಂಡೆಂಟ್ ಅವರಿಗೆ ಸಿಹಿತಿಂಡಿ ಮತ್ತು ಕೃತಜ್ಞತಾ ಪತ್ರವೊಂದನ್ನು ನೀಡುತ್ತಾರೆ. ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗಿದ್ದು ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ.

 

View this post on Instagram

 

A post shared by Pooja Shah (@freebird_pooja)

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು