ಇಂಡಿಗೋ ವಿಮಾನದಲ್ಲಿ ಸೀಟ್‌ ನಾಪತ್ತೆ: ದಂಪತಿಗೆ ಶಾಕ್‌

ಪುಣೆ: ಇತ್ತೀಚೆಗೆ ವಿಮಾನ ಪ್ರಯಾಣದಲ್ಲಿ ಹಲವು ಹಲವು ಸಮಸ್ಯೆಗಳು ಎದುರಾಗುತ್ತಿವೆ. ಬ್ಯಾಗ್‌ ಮಿಸ್ಸಿಂಗ್‌ ಸೇರಿದಂತೆ ಹಲವು ಬಾರಿ ವಿಮಾನ ಪ್ರಯಾಣವೇ ದುಸ್ತರ ಎನಿಸುವ ಮಟ್ಟಿಗೆ ಕಹಿ ಅನುಭವಗಳಾಗುತ್ತಿವೆ. ಅಂತಹುದೇ ಘಟನೆಯೊಂದು ಪುಣೆಯಲ್ಲಿ ನಡೆದಿದೆ.

ಸಾಗರೀಕಾ ಪಟ್ನಾಯಕ್ ಹಾಗೂ ಪತಿ ಸುಬ್ರತ್ ಪಟ್ನಾಯಕ್ ಪುಣೆಯಿಂದ ನಾಗ್ಪುರಕ್ಕೆ ತೆರಳಲು ಇಂಡಿಗೋ 6ಇ-6798 ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿದ ದಂಪತಿ ಚೆಕೆಂಗ್ ಮುಗಿಸಿದ್ದಾರೆ. ತಮ್ಮ ಲಗೇಜ್ ಬ್ಯಾಗ್‌ಗಳನ್ನು ನೀಡಿ ಆಸನ ನಂಬರ್ ಕೂಡ ಪಡೆದಿದ್ದಾರೆ. ಪತ್ನಿ ಸಾಗರೀಕಾ ಪಟ್ನಾಯಕ್‌ಗೆ 10ಎ ಸೀಟು ನೀಡಲಾಗಿದೆ.

ಇಂಡಿಗೋ 6ಇ-6798 ವಿಮಾನ ಹತ್ತಿದ ದಂಪತಿ ತಮ್ಮ ಸೀಟಿನ ಬಳಿ ತಲುಪಿದಾಗ ಅಚ್ಚರಿಯಾಗಿದೆ. ಕಾರಣ ಸುಬ್ರತ್ ಪಟ್ನಾಯಕ್ ಪಕ್ಕದಲ್ಲೇ ಸಾಗರೀಕಾಗೆ 10ಎ ಸೀಟು ಅಲಾಟ್ ಮಾಡಲಾಗಿತ್ತು. ಈ ಸೀಟಿನಲ್ಲಿ ಕುಶನ್ ಮಾಯವಾಗಿತ್ತು. ಅಚ್ಚರಿಗೊಂಡ ದಂಪತಿ, ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸಿಬ್ಬಂದಿ ಸೀಟಿನ ಕೆಳಗೆ ಹುಡುಕಲು ತಿಳಿಸಿದ್ದಾರೆ. ದಂಪತಿಗಳಿಬ್ಬರು ಸೀಟಿನ ಪಕ್ಕದಲ್ಲಿ, ಕೆಳಗೆ ಹುಡುಕಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ.

ಮತ್ತೆ ಸಿಬ್ಬಂದಿ ಕರೆದು ಮಾಹಿತಿ ನೀಡಿದ್ದಾರೆ. ಈ ವೇಳೆ ವಿಮಾನ ಸಿಬ್ಬಂದಿಗಳು ತೆರಳಿ ಬೇರೊಂದು ಕುಶನ್ ತಂದು ಸೀಟಿಗೆ ಜೋಡಿಸಿದ್ದಾರೆ. ಆದರೆ ಈ ಕುಶನ್ ಸೀಟಿಗೆ ಸರಿಯಾಗಿ ಹೊಂದಿಕೆಯಾಗುತ್ತಿರಲಿಲ್ಲ. ಆದರೆ ಬೇರೆ ದಾರಿಯಿಲ್ಲದೆ ಇದೇ ಸೀಟಿನಲ್ಲಿ ಕುಳಿತು ಸಾಗರೀಕಾ ಪಟ್ನಾಯಕ್ ಪ್ರಯಾಣ ಮಾಡಿದ್ದಾರೆ.

ಈ ಕುರಿತ ಫೋಟೋವನ್ನು ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದು ಸೇವಾ ನ್ಯೂನ್ಯತೆ ಬಗ್ಗೆ ಹೇಳಿಕೊಂಡಿದ್ದಾರೆ. ಹಲವು ಟ್ವೀಟ್‌ ದಾರರು ವಿಮಾನ ಕಂಪನಿಗಳ ಇಂತಹ ನಿರ್ಲಕ್ಷ್ಯದ ಬಗ್ಗೆ ಆಕ್ರೋಶಭರಿತ ಟ್ವೀಟ್‌ ಮಾಡಿದ್ದಾರೆ.

Ashika S

Recent Posts

ಸಲ್ಮಾನ್‌ ಖಾನ್‌ ʼಸಿಕಂದರ್‌ʼಗೆ ರಶ್ಮಿಕಾ ಮಂದಣ್ಣ ನಾಯಕಿ

ಕನ್ನಡದ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣದ ಸಿನಿಮಾಗಳ ಬಳಿಕ ಬಿಟೌನ್ ನಲ್ಲಿ ಅದೃಷ್ಟ ಖುಲಾಯಿಸಿದೆ. ರಣ್ಬೀರ್ ಕಪೂರ್ ಅವರ 'ಅನಿಮಲ್'…

2 mins ago

ಇಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 85 ವಿಮಾನ ಹಾರಾಟ ರದ್ದು

ಇಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ 85 ಫ್ಲೈಟ್​ಗಳು ರದ್ದಾಗಿವೆ.

9 mins ago

ಅಯೋಧ್ಯಾದಲ್ಲಿ ಬಾಲರಾಮನಿಗೆ ತಲೆಬಾಗಿ ನಮಿಸಿದ ರಾಜ್ಯಪಾಲ ಆರಿಫ್‌ ಮೊಹಮ್ಮದ್

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್  ಖಾನ್‌ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ…

12 mins ago

ಚಿಕನ್ ಶವರ್ಮಾ ವಿಷ ಏಕಾಗ್ತಿದೆ ಗೊತ್ತ; ಇದನ್ನೊಮ್ಮೆ ಓದಿ

ಚಿಕನ್ ಶವರ್ಮಾ ತಿಂದ 19 ವರ್ಷದ ತರುಣನೋರ್ವ ಸಾವಿಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕೆಟ್ಟು ಹೋದ ಕೋಳಿ ಮಾಂಸವನ್ನು ಶವರ್ಮಾ…

27 mins ago

ಕುಡಿಯುವ ನೀರಿನ ಸಮಸ್ಯೆಯನ್ನು ತಪ್ಪಿಸಲು ಪ್ರಾಚೀನ ಕೆರೆಗಳಿಗೆ ಹೊಸರೂಪ

ಕುಡಿಯುವ ನೀರಿನ ಸಮಸ್ಯೆಯನ್ನು ತಪ್ಪಿಸಲು ಪುತ್ತೂರು ಉಪವಿಭಾಗಕ್ಕೆ ಸಂಬಂಧಿಸಿದ ಪ್ರಾಚೀನ ಕೆರೆಗಳಿಗೆ ಹೊಸರೂಪ ನೀಡಲು ಇಲಾಖೆ ಮುಂದಾಗಿದ್ದು ಪುತ್ತೂರು ಸಹಾಯಕ…

32 mins ago

ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಚಿಕನ್​​ ಶವರ್ಮಾ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, 19 ವರ್ಷದ ಯುವಕನೊಬ್ಬ ಚಿಕನ್ ಶವರ್ಮಾ…

58 mins ago