ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನೀಲಿ ಚೀಲದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಬಂದಿದೆ. ಕರೆ ಮಾಡಿದ ಕೂಡಲೇ, ವಿಮಾನ ನಿಲ್ದಾಣದ ಅಧಿಕಾರಿಗಳು ಸಕ್ರಿಯರಾಗಿ, ಬಾಂಬ್ ಸ್ಕ್ವಾಡ್ ತಂಡವನ್ನು ವಿಮಾನ ನಿಲ್ದಾಣಕ್ಕೆ ಕರೆಸಿದೆ. ಬಳಿಕ ತಪಸಾಣೆ ನಡೆದಿದ್ದು, ತನಿಖೆಯ ಸಮಯದಲ್ಲಿ ಏನೂ ಕಂಡುಬಂದಿಲ್ಲ.
ಘಟನೆ ಬಳಿಕ ಮುಂಬೈ ಪೊಲೀಸರು ಮಾತನಾಡಿ, ವಿಮಾನ ನಿಲ್ದಾಣದಲ್ಲಿ ನೀಲಿ ಚೀಲದಲ್ಲಿ ಬಾಂಬ್ ಇದೆ ಎಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಕರೆ ಮಾಡಲಾಗಿದೆ. ಆದರೆ ಅಂತಹ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಇನ್ನು ಕರೆ ಮಾಡಿದವನ ಪತ್ತೆಗಾಗಿ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.