1.51 ಕೋಟಿ ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಎಫ್​ಐಆರ್ ದಾಖಲು

ಮುಂಬೈ: ವಂಚನೆ ಆರೋಪದಡಿಯಲ್ಲಿ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್​ ಕುಂದ್ರಾ ವಿರುದ್ಧ ನಿತಿನ್​ ಬರೈ ಎಂಬುವರು ದೂರು ದಾಖಲಿಸಿದ್ದು, ಬಾಂದ್ರಾ ಪೊಲೀಸ್​ ಠಾಣೆಯಲ್ಲಿ ಶನಿವಾರ ಎಫ್​ಐಆರ್​ ದಾಖಲಾಗಿದೆ.

ದೂರಿನ ಪ್ರಕಾರ 2014ರ ಜುಲೈನಲ್ಲಿ ಎಸ್​ಎಫ್​ಎಲ್​ ಫಿಟ್​ನೆಸ್​ ಕಂಪನಿಯ ನಿರ್ದೇಶಕ ಕಾಶಿಫ್​ ಖಾನ್, ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ಮತ್ತು ಇತರರು ಸೇರಿ ಲಾಭ ಸಿಗುತ್ತದೆ ಎಂದು ಆಮಿಷವೊಡ್ಡಿ ಕಂಪನಿಯಲ್ಲಿ ಬಂಡವಾಳ ಹೂಡವಂತೆ ನಿತಿನ್​ತನ್ನು ಕೇಳಿದ್ದರು.

ಅದರಂತೆ 1.5 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದೇನೆಂದು ನಿತಿನ್​ ಹೇಳಿದ್ದಾರೆ. ​

ಇಷ್ಟೇ ಅಲ್ಲದೆ, ಪುಣೆ ಸಮೀಪದ ಹದಪ್ಸರ್​ ಮತ್ತು ಕೊರೆಂಗಾವ್​ನಲ್ಲಿ ಸ್ಪಾ ಮತ್ತು ಜಿಮ್​ ತೆರೆಯಲು ಫ್ರಾಂಚೈಸಿಯನ್ನು ಒದಗಿಸುವುದಾಗಿಯೂ ಎಸ್​ಎಫ್​ಎಲ್​ ಕಂಪನಿ ಭರವಸೆ ನೀಡಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಇದಾದ ಬಳಿಕ ಹಣ ಹಿಂತಿರುಗಿಸುವಂತೆ ಕೇಳಿದೆ. ಆದರೆ, ಹಣ ಕೊಡದೆ ಬೆದರಿಕೆ ಹಾಕುತ್ತಿದ್ದಾರೆಂದು ದೂರಿನಲ್ಲಿ ನಿತಿನ್​ ಬರೈ ಉಲ್ಲೇಖಿಸಿದ್ದಾರೆ.

ದೂರಿನ ಆಧಾರದ ಮೇಲೆ ಬಾಂದ್ರಾ ಪೊಲೀಸ್​ ಎಫ್​ಐಆರ್​ ದಾಖಲಿಸಿದ್ದು, ಪ್ರಕರಣ ಸಂಬಂಧ ತನಿಖೆಯನ್ನು ಕೈಗೊಂಡಿದ್ದಾರೆ. ಈಗಾಗಲೇ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿನ ಮೇಲೆ ಹೊರಗಿರುವ ರಾಜ್​ ಕುಂದ್ರಾಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

Swathi MG

Recent Posts

ಕೊರೊನಾ ವ್ಯಾಕ್ಸಿನ್ ಹಿಂಪಡೆದ ಅಸ್ಟ್ರಾಜೆನೆಕಾ : ಹೆಚ್ಚಿದ ಆತಂಕ

ಕೊರೊನಾ ವ್ಯಾಕ್ಸಿನ್ ಮತ್ತು ಕೋವಶೀಲ್ಡ್‌ ಪಡೆದವರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾತಿಗೆ ಧಂಗಾಗಿರುವ ಜನರಿಗೆ ಇದೀಗ ಕೊರೊನಾ ವ್ಯಾಕ್ಸಿನ್ ಹಿಂಪಡೆದ…

40 mins ago

ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ : ಬೇಲಾ? ಜೈಲಾ? ಇಂದೇ ನಿರ್ಣಾಯಕ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ…

55 mins ago

ಪ್ರತಿಷ್ಠಿತ ಕಂಪನಿಗಳ ನಕಲು ದಂಧೆ : ಆರೋಪಿಗಳು ಸಿಬಿಐ ವಶ

ದಿನ ನಿತ್ಯ ಜನರು ಬಳಸುವ ವಸ್ತುಗಳನ್ನೇ ಟಾರ್ಗೆಟ್ ಮಾಡಿಕೊಂಡ ಗ್ಯಾಂಗ್​ವೊಂದು ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿತ್ತು. ಜೊತೆಗೆ…

2 hours ago

ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ : ಹವಮಾನ ಇಲಾಖೆ ಎಚ್ಚರ

ದೇಶಾದ್ಯಂತ ಬಿರು ಬಿಸಿಲಿನ ಬೇಗೆಯಲ್ಲಿ ಬೆಂದ ಜನರಿಗೆ ಇದು ಸಿಹಿ ಸುದ್ದಿ ಆದರೆ ಎಚ್ಚರಿಕೆ ವಹಿಸುವುದು ಅಗತ್ಯ.ದೇಶದ ಹಲವು ರಾಜ್ಯಗಳಲ್ಲಿ…

2 hours ago

ಮತದಾರರು ಮತ್ತು ಜಿಲ್ಲಾಡಳಿತಕ್ಕೆ ಆಲಗೂರ್ ಅಭಿನಂದನೆ

ಜಿಲ್ಲೆಯಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆ ಶಿಸ್ತು ಮತ್ತು ಶಾಂತಿ-ಸುವ್ಯವಸ್ಥೆಯಿಂದ ಕೂಡಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಸಂತಸ…

2 hours ago

ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ : ಪ್ರಕರಣ ದಾಖಲು

ನಗರದ ವೈದ್ಯಕೀಯ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೊ ಚಿತ್ರೀಕರಿಸಿದ 17 ವರ್ಷದ ಬಾಲಕನೊಬ್ಬನನ್ನು ವಶಕ್ಕೆ ಪಡೆದು ಬಾಲನ್ಯಾಯ…

2 hours ago