ಮುಂಬೈ: ಮುಂಬೈನಿಂದ ಚೆನ್ನೈಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನ ಸಿಬ್ಬಂದಿಗೆ ಒಂದು ವಿಶೇಷತೆ ಕಾದಿತ್ತು. ಶ್ವಾನ ಪ್ರಿಯೆ ಮಹಿಳೆಯೊಬ್ಬಳು ತನ್ನ ನಾಯಿಗಾಗಿ ಇಡೀ ಬಿಜಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ್ದರು.
ಮಾಲ್ಟೀಸ್ ನಾಯಿ ಐಷಾರಾಮಿಯಾಗಿ ಬಿಝಿನೆಸ್ ಕ್ಲಾಸ್ ನಲ್ಲಿ ಏಕಾಂತವಾಗಿ ಚೆನ್ನೈಗೆ ಹಾರಿರುವುದು ಇದೇ ಮೊದಲು. ಅದಕ್ಕಾಗಿ ಮಹಿಳೆ 2.5 ಲಕ್ಷ ರೂ. ತೆತ್ತಿದ್ದಾಳೆ. ಬಿಝಿನೆಸ್ ಕ್ಲಾಸ್ ಕ್ಯಾಬಿನ್ ನಲ್ಲಿ ಉದ್ಯಮಿಗಳು, ಸೆಲಬ್ರಿಟಿಗಳು ಸಾಮಾನ್ಯವಾಗಿ ಪ್ರಯಾಣಿಸುತ್ತಾರೆ.
ಸಾಕುಪ್ರಾಣಿಗಳನ್ನು ವಿಮಾನದೊಳಕ್ಕೆ ಪ್ರವೇಶ ಕಲ್ಪಿಸಿಕೊಡುವ ಏಕೈಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ. ಕಳೆದ ವರ್ಷ ಪ್ರಯಾಣಿಕರು ಹೆಚ್ಚು ಬಾರಿ ತಮ್ಮ ಸಾಕುಪ್ರಾಣಿಗಳೊಂದಿಗೆ ಪ್ರಯಾಣ ಮಾಡಿದ್ದರೆಂದು ಏರ್ ಇಂಡಿಯ ತಿಳಿಸಿದೆ.