ಮಹಾರಾಷ್ಟ್ರ : ಮಹಾರಾಷ್ಟ್ರದ ಮುಂಬೈನಲ್ಲಿ 14 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಮೊಬೈಲ್ ಗೇಮಿಂಗ್ ಚಟದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಧ್ಯ ಮುಂಬೈನ ಭೋಯಿವಾಡ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಮನೆಯಲ್ಲಿ ತಾಯಿ ಮತ್ತು ಸಹೋದರಿ ಇಲ್ಲದ ವೇಳೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮುನ್ನ ತಂದೆಗೆ ಕರೆ ಮಾಡಿದ್ದ. ಆದರೆ ತಂದೆ ಚಾಲನೆ ಮಾಡುತ್ತಿದ್ದ ಕಾರಣ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರು ಮನೆಗೆ ಹಿಂದಿರುಗಿದಾಗ ಬಾಲಕನ ಕೋಣೆ ಒಳಗಿನಿಂದ ಮುಚ್ಚಲ್ಪಟ್ಟಿತ್ತು. ಈ ವೇಳೆ ಪೋಷಕರು ಎಷ್ಟೇ ಕೂಗಿದರೂ ಬಾಗಿಲು ತೆಗೆಯಲಿಲ್ಲ. ಇದರಿಂದ ಅನುಮಾನಗೊಂಡ ಅವರು ಬಾಗಿಲು ಹೊಡೆದಿದ್ದಾರೆ. ನೇಣು ಹಾಕಿಕೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಗೇಮಿಂಗ್ ಚಟಕ್ಕೆ ಬಿದ್ದು ಬಾಲಕ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಅದೇ ಅರ್ಥದಲ್ಲಿ ತನಿಖೆ ನಡೆಸಲಾಗುತ್ತಿದೆ. ಹುಡುಗ ಮೊಬೈಲ್ ಫೋನ್ನಲ್ಲಿ ಆಟವಾಡುತ್ತಿದ್ದನು, ಆದರೆ ಗೇಮಿಂಗ್ ಚಟದ ಬಗ್ಗೆ ಪೋಷಕರು ಇದುವರೆಗೆ ದೂರು ನೀಡಿಲ್ಲ.