News Karnataka Kannada
Saturday, May 04 2024
ಮಹಾರಾಷ್ಟ್ರ

ಮುಂಬೈ: ನವಜಾತ ಶಿಶುವನ್ನು ಕಸದ ತೊಟ್ಟಿ ಬಳಿ ಎಸೆದಿದ್ದ ತಾಯಿ ಬಂಧನ

Gang arrested for selling newborns to customers
Photo Credit :

ಮುಂಬೈ: 15 ದಿನದ ನವಜಾತ ಶಿಶುವನ್ನು ಕಸದ ತೊಟ್ಟಿಯ ಸಮೀಪ ಬಿಟ್ಟುಹೋದ ಆರೋಪದ ಮೇಲೆ 22 ವರ್ಷದ ಮಹಿಳೆಯನ್ನು ಥಾಣೆ ಸಮೀಪದ ಖಡವಲಿ ಎಂಬಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ಮರೀನ್ ಡ್ರೈವ್‌ನಲ್ಲಿ 15 ದಿನದ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತಾಯಿಗಾಗಿ ಹುಡುಕಾಟ ಆರಂಭಿಸಿದ್ದರು. 12 ದಿನಗಳ ಹುಡುಕಾಟದ ನಂತರ ಮುಂಬೈನ ಮಹಿಳೆ ಮನೆಯಿಂದ 75 ಕಿ. ಮೀ. ಮೀಟರ್ ದೂರದಲ್ಲಿರುವ ಖಡವಲಿಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಮಹಿಳೆಗೆ ಸಹಕಾರ ನೀಡಿದ ಆರೋಪದ ಮೇಲೆ 28 ವರ್ಷದ ಮಹಿಳೆಯ ಸಹೋದರನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಿಳೆಗೆ ಬಲವಂತದ ಮದುವೆ; ವಿಚಾರಣೆ ವೇಳೆ ಮಹಿಳೆ, ಬಿಹಾರದ ತನ್ನ ಹಳ್ಳಿಯಲ್ಲಿ ತನಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ವ್ಯಕ್ತಿಯನ್ನು ವಿವಾಹವಾಗಲು ಒತ್ತಾಯಿಸಲಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಮದುವೆಯಾದ ಕೆಲವು ತಿಂಗಳ ನಂತರ, ಆಕೆ ತನ್ನ ಸಹೋದರನ ಸಹಾಯದಿಂದ ಗಂಡನ ಮನೆಯಿಂದ ಓಡಿಬಂದು ಮಹಾರಾಷ್ಟ್ರದ ಖಡವಲಿಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಾದ ಹಲವು ಸಮಯದ ಬಳಿಕ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಆದರೆ, ಹೊಸ ಜೀವನ ಪ್ರಾರಂಭಿಸಲು ಮತ್ತು ಮಹಾರಾಷ್ಟ್ರದಲ್ಲಿ ತನ್ನದೇ ವಯಸ್ಸಿನ ಯಾರೊಂದಿಗಾದರೂ ನೆಲೆಸಲು ಬಯಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬುಧವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಶ್ಯೂರಿಟಿಯಾಗಿ ತಲಾ 10,000 ನಗದು ಠೇವಣಿ ಇಡುವ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ. ಆದರೆ ಆರೋಪಿಗಳ ಬಳಿ ಹಣವಿಲ್ಲದಿರುವುದರಿಂದ ಬೇರೆ ಯಾರಾದರೂ ಹಣವನ್ನು ಪಾವತಿಸುವವರೆಗೆ ಅವರು ಜೈಲಿನಲ್ಲೇ ಇರಬೇಕಾಗುತ್ತದೆ.

ಮಗುವನ್ನು ರಕ್ಷಿಸಿದ ಪೌರಕಾರ್ಮಿಕರು; ಏಪ್ರಿಲ್ 17 ರಂದು ಉಲ್ಹಾಸ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶುವನ್ನು ಬಿಸಾಡಲು ನಿರ್ಧರಿಸಿದ್ದಾಳೆ. ಮಹಿಳೆಯ ಈ ನಿರ್ಧಾರವನ್ನು ಆಕೆಯ ಸಹೋದರ ಕೂಡ ಬೆಂಬಲಿಸಿದ್ದು, ಅವಳನ್ನು ಮರೀನ್ ಡ್ರೈವ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರು ಮೇಘದೂತ ಫ್ಲೈಓವರ್ ಅಡಿಯಲ್ಲಿ ಇದ್ದ ಕಸದ ತೊಟ್ಟಿಯ ಬಳಿ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೇ 6 ರಂದು ಬೆಳಗ್ಗೆ 7 ಗಂಟೆಗೆ ಮರೀನ್ ಡ್ರೈವ್‌ನ ಎನ್‌ಎಸ್ ರಸ್ತೆಯ ಕಸದತೊಟ್ಟಿಯೊಂದರ ಬಳಿ ಅನಾಥವಾಗಿದ್ದ ಮಗುವನ್ನು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಪೌರ ಕಾರ್ಮಿಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದರಿಂದಾಗಿ ಮಗು ಬದುಕುಳಿದಿದೆ. ಮಗುವನ್ನು ಡೋಂಗ್ರಿಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಶುವನ್ನು ಬಿಟ್ಟು ಹೋಗಿದ್ದಕ್ಕಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮರೀನ್ ಡ್ರೈವ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಪರಾಧಿಗಳ ಪತ್ತೆಗೆ ಹಲವು ಸಿಸಿಟಿವಿ ಕ್ಯಾಮೆರಾಗಳ ವೀಡಿಯೊ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ಪೈಕಿ ಒಂದರಲ್ಲಿ ಮಹಿಳೆಯು ಮಗುವಿನೊಂದಿಗೆ ಇದ್ದದ್ದು ಕಂಡುಬಂದಿತ್ತು ಎಂದು ಮರೀನ್ ಡ್ರೈವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿಶ್ವನಾಥ ಕೋಲೇಕಾರ್ ತಿಳಿಸಿದ್ದಾರೆ.

ಆರೋಪಿಗಳ ಪತ್ತೆಗೆ ಇನ್ಸ್‌ಪೆಕ್ಟರ್ ಸಂತೋಷ್ ಅಹ್ವಾದ್, ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಪಿಐ) ರಾಹುಲ್ ಭಂಡಾರೆ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಹುಲ್ ಕದಮ್ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು. ಪೊಲೀಸರು ಮರೀನ್ ಡ್ರೈವ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅದಾದ ಬಳಿಕ ಆ ಮಾರ್ಗದುದ್ದಕ್ಕೂ ಇದ್ದ ಪ್ರತಿ ರೈಲು ನಿಲ್ಧಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಮಹಿಳೆ ಮತ್ತು ಆಕೆಯ ಸೋದರ ಖಡವಲಿಯಲ್ಲಿ ಇಳಿದಿರುವುದು ಪತ್ತೆಯಾಯಿತು.

ಈ ಸಂಬಂಧ ಖಡವಲ್ಲಿ ಪ್ರದೇಶದಲ್ಲಿ ವಿಚಾರಣೆ ನಡೆಸಿದ ನಂತರ, ಅಂತಿಮವಾಗಿ ಮಗುವಿನ ತಾಯಿ ಮತ್ತು ಆಕೆಯ ಸೋದರನನ್ನು ಪತ್ತೆಹಚ್ಚಿ ಮುಂಬೈಗೆ ಕರೆತಂದಿದ್ದೇವೆ ಎಂದು ಮರೀನ್ ಡ್ರೈವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿಶ್ವನಾಥ್ ಕೋಲೇಕರ್ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು