News Karnataka Kannada
Sunday, April 28 2024
ಮಹಾರಾಷ್ಟ್ರ

ಮಹಾರಾಷ್ಟ್ರ: ಪತ್ನಿ ಸೀರೆ ಧರಿಸುವ ಶೈಲಿಯಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣು

Dead
Photo Credit :

ಔರಂಗಾಬಾದ್: ತನ್ನ ಪತ್ನಿ ಸೀರೆ ಧರಿಸುವ ಶೈಲಿ ಸರಿಯಿಲ್ಲ. ಆಕೆ ಅರೆಬರೆ ರೀತಿಯಲ್ಲಿ ಸೀರೆ ಧರಿಸುವ ಕಾರಣ ತನಗೆ ಎಲ್ಲರ ಮುಂದೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಔರಂಗಾಬಾದ್ ಜಿಲ್ಲೆಯ ಮುಕುಂದ ನಗರ ನಿವಾಸಿ ಸಮಾಧಾನ್ ಸಬ್ಲೆ ಎಂಬಾತ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪತಿಯಾಗಿದ್ದು, ಅದಕ್ಕೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ತಾನೇಕೆ ಸಾಯುತ್ತಿದ್ದೇನೆ ಎಂಬ ಕಾರಣವನ್ನು ಬಿಚ್ಚಿಟ್ಟಿದ್ದಾನೆ.

ನನ್ನ ಪತ್ನಿಗೆ ಸೀರೆಯನ್ನು ಸರಿಯಾಗಿ ಉಟ್ಟುಕೊಳ್ಳುವಂತೆ ಹಲವಾರು ಬಾರಿ ಕಿವಿಮಾತು ಹೇಳಿದರೂ ಸಹ ಆಕೆ ನಿರ್ಲಕ್ಷ ಮಾಡುತ್ತಿದ್ದಳು. ಇದರಿಂದಾಗಿ ನನಗೆ ಎಲ್ಲರ ಮುಂದೆ ಮುಜುಗರವಾಗುತ್ತಿತ್ತು. ಹೀಗೆ ಹೇಳಿದಾಗ ಆಕೆ ನನ್ನೊಂದಿಗೆ ಮಾತನಾಡುವುದನ್ನೇ ಬಿಟ್ಟಳು. ಇದರಿಂದಾಗಿ ಜೀವನವೇ ಬೇಡವೆಂದು ಅನಿಸಿ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಪತಿ ತಿಳಿಸಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು