News Karnataka Kannada
Friday, May 03 2024
ಮಹಾರಾಷ್ಟ್ರ

ಮಹಾರಾಷ್ಟ್ರ ಓಮಿಕ್ರಾನ್ ರೂಪಾಂತರದ ಸೋಂಕು ಇರೋದು ಪತ್ತೆ

Airport
Photo Credit :

ಮುಂಬೈ:  ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ದುಬೈ ಮತ್ತು ದೆಹಲಿ ಮೂಲಕ ಮುಂಬೈಗೆ ಆಗಮಿಸಿದ 33 ವರ್ಷದ ಪ್ರಯಾಣಿಕನ ಪ್ರಯೋಗಾಲಯದ ವರದಿಯಲ್ಲಿ, ಓಮಿಕ್ರಾನ್ ರೂಪಾಂತರದ ಸೋಂಕು ಇರೋದು ಪತ್ತೆಯಾಗಿದೆ.ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಿಂದ ದುಬೈ ಮೂಲಕ ಹಿಂದಿರುಗಿದ ಅಡೊಂಬಿವ್ಲಿ ನಿವಾಸಿಯಲ್ಲಿ ಒಮಿಕ್ರಾನ್ ಸೋಂಕು ಇರೋದು ಪತ್ತೆಯಾಗಿದೆ.

ಓಮಿಕ್ರಾನ್ ರೂಪಾಂತರದ ಸೋಂಕು ಪತ್ತೆಯಾಗಿರುವ ರೋಗಿ ಲಸಿಕೆ ಹಾಕಿಸಿಕೊಂಡಿಲ್ಲ ಎನ್ನಲಾಗಿದ್ದು, ಈ ವ್ಯಕ್ತಿಯಲ್ಲಿ, ಸ್ವಲ್ಪ ಜ್ವರ ಕಾಣಿಸಿಕೊಂಡಿದೆ ಎನ್ನಲಾಗಿದೆ, ಸದ್ಯ ಈ ಸೋಂಕಿತನನ್ನು ಕಲ್ಯಾಣ್-ಡೊಂಬಿವ್ಲಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಾಂಬಿಯಾದಿಂದ ಆಗಮಿಸಿದ 60 ವರ್ಷದ ಪುರುಷನ ಮಾದರಿಯನ್ನು ಜೀನೋಮಿಕ್ ಅನುಕ್ರಮದ ಫಲಿತಾಂಶಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಪಡೆಯಲಾಗಿದೆ ಮತ್ತು ಮಾದರಿಯಲ್ಲಿ ಓಮಿಕ್ರಾನ್ ಪತ್ತೆಯಾಗಿಲ್ಲ. ಬದಲಾಗಿ, ಡೆಲ್ಟಾ ರೂಪಾಂತರದ ಉಪತಳಿಗಳು ಪತ್ತೆಯಾಗಿದೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು