ನವದೆಹಲಿ :ಮಹಾರಾಷ್ಟ್ರದಲ್ಲಿ ಮೂರು ವರ್ಷದ ಮಗು ಸೇರಿ 7 ಮಂದಿಗೆ ಒಮಿಕ್ರಾನ್ ಸೋಂಕು ದೃಢಪಟ್ಟರೆ ಗುಜರಾತ್ ನಲ್ಲಿ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಭಾರತದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿನ್ನೆ ಮಹಾರಾಷ್ಟ್ರ ದಲ್ಲಿ 7 ಹಾಗೂ ಗುಜರಾತ್ ಇಬ್ಬರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.
ದೇಶದಲ್ಲಿ ಇದುವರೆಗೆ 32 ಮಂದಿಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿ 17 ಮಂದಿಗೆ, ರಾಜಸ್ತಾನದಲ್ಲಿ 9, ಕರ್ನಾಟಕದಲ್ಲಿ 2 ಮತ್ತು ಗುಜರಾತ್ ನಲ್ಲಿ ಮೂವರು ಮತ್ತು ದೆಹಲಿಯಲ್ಲಿ ಒಬ್ಬರಿಗೆ ಒಮ್ರಿಕಾನ್ ರೂಪಾಂತರ ಸೋಂಕು ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.