ಮಹಾರಾಷ್ಟ್ರ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಮಾಹಿತಿಯನ್ನು ಸ್ವತಃ ಅಕ್ಷಯ್ ಕುಮಾರ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಈ ಸಂದೇಶ ನೀಡಿದ್ದಾರೆ. ಇದೀಗ ಎಲ್ಲರೂ ಅವರ ಆರೋಗ್ಯ ಸುಧಾರಿಸಲಿ ಎಂದು ಎಲ್ಲರೂ ಪ್ರಾರ್ಥಿಸಲು ಆರಂಭಿಸಿದ್ದಾರೆ.
ಕೊರೊನಾ ಪಾಸಿಟಿವ್ ಕಂಡುಬಂದಿರುವ ಕಾರಣ ಅಕ್ಷಯ್ ಕುಮಾರ್ ಈ ಬಾರಿ 2022 ರ ಕೇನ್ಸ್ ಚಲನಚಿತ್ರೋತ್ಸವಲ್ಲಿ ಇಂಡಿಯಾ ಪೆವಿಲಿಯನ್ಗೆ ಭೇಟಿ ನೀಡುವುದನ್ನು ರದ್ದುಗೊಳಿಸಿರುವುದಾಗಿ ನಟ ಹೇಳಿದ್ದಾರೆ.
ಅಕ್ಷಯ್ ಕುಮಾರ್ ಟ್ವೀಟ್ ಮಾಡಿ, ‘ನಾನು ಇಂಡಿಯನ್ ಪೆವಿಲಿಯನ್ ಕೇನ್ಸ್ ಫಿಲ್ಮ್ ಫೆಸ್ಟಿವಲ್ 2022 ನಲ್ಲಿ ನನ್ನ ಸಿನಿಮಾವನ್ನು ಮುಂದುವರಿಸಲು ತುಂಬಾ ಉತ್ಸುಕನಾಗಿದ್ದೆ. ಆದರೆ, ನನಗೆ ಕರೋನಾ ಪಾಸಿಟಿವ್ ಕಂಡುಬಂದಿರುವುದರಿಂದ ಈಗ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದಿದ್ದಾರೆ.