News Karnataka Kannada
Sunday, April 28 2024
ಮಹಾರಾಷ್ಟ್ರ

ಗಾಜು ಬಿರುಕು ಬಿಟ್ಟ ಹಿನ್ನೆಲೆ, ವಾಪಸ್ಸಾದ ಸ್ಪೈಸ್ ಜೆಟ್ ವಿಮಾನ

Flight
Photo Credit : IANS

ಮುಂಬೈ: ವಿಮಾನದ ಮುಂದಿನ ಗಾಜು ಸೀಳು ಬಿಟ್ಟ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ಮುಂಬೈ ವಿಮಾನನಿಲ್ದಾಣಕ್ಕೆ ವಾಪಸಾದ ಘಟನೆ ಶನಿವಾರ ನಡೆದಿದೆ.

ಮೇ 28 ರಂದು ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನವು ಮುಂಬೈನಿಂದ ಗೋರಖ್ ಪುರಕ್ಕೆ ಹೊರಟಿತ್ತು. ಪ್ರಯಾಣದ ವೇಳೆ ವಿಮಾನದ ಮುಂದಿನ ಗ್ಲಾಸ್ ನಲ್ಲಿ ಬಿರುಕು ಆಗಿರುವುದನ್ನು ಪೈಲಟ್ ಗಮನಿಸಿದ್ದರು ಎಂದು ಸ್ಪೈಸ್ ಜೆಟ್ ವಿಮಾನ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

ಇದು ಗಮನಕ್ಕೆ ಬಂದ ತಕ್ಷಣ ಪೈಲಟ್ ವಿಮಾನಯಾನ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅವರಿಂದ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆದು ವಿಮಾನವನ್ನು ವಾಪಸ್ ಮುಂಬೈ ವಿಮಾನನಿಲ್ದಾಣಕ್ಕೆ ತಂದು ಇಳಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ವಿಮಾನವನ್ನು ಸುರಕ್ಷಿತವಾಗಿ ಮುಂಬೈ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ ಪೈಲಟ್ ಕಾರ್ಯಕ್ಷಮತೆಯನ್ನು ವಿಮಾನಿನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು