News Karnataka Kannada
Wednesday, May 01 2024
ಮಹಾರಾಷ್ಟ್ರ

ಕೇವಲ 90 ನಿಮಿಷಗಳಲ್ಲಿ ಪತ್ತೆಯಾಗುತ್ತೆ ʼಒಮಿಕ್ರಾನ್ʼ

Omicron
Photo Credit :

  ಮಹಾರಾಷ್ಟ್ರ :ಕೇವಲ 90 ನಿಮಿಷಗಳಲ್ಲಿ ಒಮಿಕ್ರಾನ್ ಪತ್ತೆ ಮಾಡಬಲ್ಲ ಆರ್‌ಟಿ-ಪಿಸಿಆರ್‌ ಮಾದರಿಯನ್ನು ಭಾರತೀಯ ತಾಂತ್ರಿಕ ಸಂಸ್ಥೆ-ದೆಹಲಿ ಅಭಿವೃದ್ಧಿ ಪಡಿಸಿದೆ. ಐಐಟಿಯ ಕುಸುಮಾ ಜೀವವಿಜ್ಞಾನ ಶಾಲೆಯಲ್ಲಿ ಅಭಿವೃದ್ಧಿಪಡಿಸಲಾದ ಈ ಆರ್‌ಟಿ-ಪಿಸಿಆರ್‌ ಆಧರಿತ ಪರೀಕ್ಷೆಯಲ್ಲಿ ಸಾರ್ಸ್-ಕೋವಿ-2ನ ಒಮಿಕ್ರಾನ್ (B.1.1.529.1) ಮಾದರಿಯನ್ನು ಪತ್ತೆ ಮಾಡಬಹುದಾಗಿದೆ.ಡಿಎನ್‌ಎ ಚೂರುಗಳ ಮುಖಾಂತರ, ಎಸ್‌ ವಂಶವಾಹಿಯಲ್ಲಿ ಕಂಡುಬರುವ ರೂಪಾಂತರವನ್ನು ಗುರುತಿಸಲು ಮಾಡಲಾದ ಈ ಪರೀಕ್ಷೆಗಳಲ್ಲಿ ಒಮಿಕ್ರಾನ್ ತಳಿಯ ನಿರ್ದಿಷ್ಟ ಲಕ್ಷಣಗಳಿಗಾಗಿ ಶೋಧ ನಡೆಯುತ್ತದೆ.

ಸದ್ಯ, ಸೀಕ್ವೆನ್ಸಿಂಗ್ ಆಧರಿತ ಪರೀಕ್ಷೆಯೊಂದರಲ್ಲಿ ಒಮಿಕ್‌ಆನ್ ಪತ್ತೆಯ ಪರೀಕ್ಷೆ ಮಾಡಲಾಗುತ್ತಿದ್ದು, ಫಲಿತಾಂಶಕ್ಕಾಗಿ ಮೂರು ದಿನಗಳು ಕಾಯಬೇಕಾಗುತ್ತದೆ.

ಆದರೆ ಐಐಟಿಯ ಈ ಮಾದರಿ ಮೂಲಕ ಬರೀ ಒಂದೂವರೆ ಗಂಟೆಗಳಲ್ಲಿ ಫಲಿತಾಂಶ ಬರಲಿದೆ.ಒಮಿಕ್ರಾನ್‌ನಲ್ಲಿ ಕಂಡು ಬರುವ ನಿರ್ದಿಷ್ಟ ಮ್ಯುಟೇಶನ್‌ಗಳನ್ನು (ರೂಪಾಂತರ) ಪತ್ತೆ ಮಾಡುವ ಮೂಲಕ ಕೋವಿಡ್‌ನ ಹೊಸ ಮಾದರಿ ಸೋಂಕಿನ ಪತ್ತೆ ಮಾಡಲಾಗುತ್ತದೆ.

ತಾನು ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನಕ್ಕೆ ಭಾರತೀಯ ಪೇಟೆಂಟ್ ಕೋರಿ ಐಐಟಿ ಅರ್ಜಿ ಸಲ್ಲಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು