ಭೋಪಾಲ್: ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರುಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಅರಿವಿನ ಬಗ್ಗೆ ಮನವರಿಕೆ ಅವರಲ್ಲಿ ಜ್ಞಾನದ ಬೀಜವನ್ನು ಬಿತ್ತಿ ಮುನ್ನಡೆಸುವವರೇ ಶಿಕ್ಷಕರು. ಆದರೆ ಇಲ್ಲೊಬ್ಬ ಶಿಕ್ಷಕಿ ಶಾಲೆಯಲ್ಲಿ ಆರಾಮಾಗಿ ನಿದ್ರೆ ಮಾಡಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ದೃಶ್ಯ ಕಂಡು ಬಂದಿದ್ದು, ಮಧ್ಯ ಪ್ರದೇಶದ ಚಿತ್ರಕೂಟ್ ಎಂಬಲ್ಲಿ. ಶಿಕ್ಷಕಿ ಮೊಬೈಲ್ ಅನ್ನು ಬಳಕೆ ಮಾಡುತ್ತಾ ಮಾಡುತ್ತಾ ನಿದ್ದೆಗೆ ಜಾರಿ ಬಿಟ್ಟಿದ್ದಾರೆ. ಇನ್ನೂ ಶಿಕ್ಷಕಿ ಮಲಗಿರುವುದನ್ನು ನೋಡಿದ ಮಕ್ಕಳು ತರಗತಿಯಲ್ಲಿ ಪೊರಕೆ ಹಿಡಿದುಕೊಂಡು ಗುಡಿಸುತ್ತಾ ಮೋಜು ಮಸ್ತಿ ಮಾಡುತ್ತಿದ್ದರು. ಇದೇ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ಸಖತ್ ವೈರಲ್ ಆಗಿದೆ.