News Karnataka Kannada
Friday, May 03 2024
ಮಧ್ಯ ಪ್ರದೇಶ

ಯುವತಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್

ಯುವಕನೋರ್ವ ಯುವತಿಯನ್ನು 1 ತಿಂಗಳ ಕಾಲ ಒತ್ತೆಯಾಳಾಗಿ ಇಟ್ಟುಕೊಂಡು ನಿತ್ಯ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.
Photo Credit : NewsKarnataka

ಭೋಪಾಲ್: ಯುವಕನೋರ್ವ ಯುವತಿಯನ್ನು 1 ತಿಂಗಳ ಕಾಲ ಒತ್ತೆಯಾಳಾಗಿ ಇಟ್ಟುಕೊಂಡು ನಿತ್ಯ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.

23 ವರ್ಷದ ಯುವತಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡ ಆರೋಪಿ ಅಯಾನ್ ಪಠಾಣ್​​ನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಕೈಗೊಂಡಿದ್ದಾರೆ.

ಆರೋಪಿ ಯುವಕ ಯುವತಿಗೆ ನಿತ್ಯ ಕಣ್ಣಿಗೆ, ಬಾಯಿಗೆ ಖಾರದ ಪುಡಿ ಹಾಕಿ ಪೈಪ್​, ಬೆಲ್ಟ್​ಗಳಿಂದ ಹೊಡೆದು ದೌರ್ಜನ್ಯ ನಡೆಸುತ್ತಿದ್ದ.  ಯುವಕನ ಚಿತ್ರಹಿಂಸೆಯಿಂದ ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆರೋಪಿ ಹಾಗೂ ಯುವತಿ ಊರಲ್ಲಿ ನೆರೆಹೊರೆಯವರಾಗಿ ವಾಸಿಸುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಸ್ನೇಹ ಬೆಳೆದು ಸಲುಗೆಯಿಂದ ಸಂಬಂಧದಲ್ಲಿದ್ದರು. ಅವನಿಂದ ದೂರ ಇರುವಂತೆ ಯುವತಿಯ ತಾಯಿಯು ಬೈದು, ಎಚ್ಚರಿಕೆ ನೀಡಿ ಶಿವಪುರಿ ಎನ್ನುವ ಊರಿಗೆ ಕರೆದುಕೊಂಡು ಹೋಗಿದ್ದಳು. ಯುವತಿ ಮತ್ತೆ ವಾಪಸ್ ಬಂದು ಅವನ ಜೊತೆ ಇರಲು ಪ್ರಾರಂಭಿಸಿದ್ದಳು. ಕೆಲವೇ ತಿಂಗಳಲ್ಲಿ ಆಕೆಗೆ ಚಿತ್ರಹಿಂಸೆ ಕೊಡಲು ಪ್ರಾರಂಭಿಸಿದ್ದ. ಅಲ್ಲದೇ ನಿಮ್ಮ ಮನೆಯನ್ನ ನನಗೆ ಕೊಡುವಂತೆ ಕೇಳಲು ಪ್ರಾರಂಭಿಸಿದ್ದ ಎನ್ನಲಾಗಿದೆ.

ಮನೆ ವರ್ಗಾಯಿಸದಿದ್ದಕ್ಕೆ ಕಳೆದ ಒಂದು ತಿಂಗಳಿನಿಂದ ಯುವತಿಯನ್ನು ರೂಮ್​ನಲ್ಲಿ ಕೂಡಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿ, ಕಾರದಪುಡಿ ಎರಚಿ ಪೈಪ್​ ಮತ್ತು ಬೆಲ್ಟ್​ನಿಂದ ಹೊಡೆದಿದ್ದಾನೆ. ಅವಾಚ್ಯ ಶಬ್ಧದಿಂದ ಹೇಗೆಂದರೆ ಹಾಗೇ ನಿಂದಿಸಿದ್ದಾನೆ. ಯುವತಿಗೆ ಹೊಡೆಯುವ ವೇಳೆ ಯಾವುದೇ ಶಬ್ಧ ಹೊರ ಬರಬಾರದು ಎಂದು ಬಾಯಿಗೆ ಕಾರದ ಪುಡಿ ತುಂಬಿ ಅದರ ಮೇಲೆ ಕಿರುಚಲು ಬಾರದಂತೆ ಪ್ಲಾಸ್ಟರ್ ಅನ್ನು ಫೆವಿಕಿಕ್​ ಹಾಕಿ ಅಂಟಿಸಿದ್ದ. ಹೀಗಾಗಿ ಒಳಗೆ ಎಷ್ಟೇ ಹೊಡೆದರೂ, ಬಡಿದರೂ ಸೌಂಡ್​ ಹೊರ ಬರುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು