ಮಧ್ಯಪ್ರದೇಶ: ವಿಜಯಪುರದಲ್ಲಿ 2 ವರ್ಷದ ಬಾಲಕ ಬೋರ್ವೆಲ್ಗೆ ಬಿದ್ದ ಘಟನೆ ಮಾಸುವ ಮುನ್ನವೇ ಮಧ್ಯಪ್ರದೇಶದಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೃಷಿ ಭೂಮಿಯಲ್ಲಿ ಆರು ವರ್ಷದ ಬಾಲಕನೋರ್ವ ತೆರೆದ ಬೋರ್ವೆಲ್ ಒಳಕ್ಕೆ ಬಿದ್ದಿದ್ದಾನೆ.
ಸದ್ಯ ಆತನಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಆಟವಾಡುತ್ತಿದ್ದ ಮಗು ಬೋರ್ವೆಲ್ ಒಳಕ್ಕೆ ಬಿದ್ದಿದೆ. ಈ ಘಟನೆ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ, ಮಗುವನ್ನು ಬೋರ್ವೆಲ್ನಿಂದ ಹೊರತೆಗೆಯಲು ಕಾರ್ಯಚರಣೆ ಆರಂಭಗೊಂಡಿದೆ. ಎರಡು ಜೆಸಿಬಿ ಮೂಲಕ ಕೆಲಸಗಳು ನಡೆಯುತ್ತಿವೆ.