ಭೋಪಾಲ್: ಭೋಪಾಲ್ ನಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ಬೀದಿ ನಾಯಿಗಳ ಅಟ್ಟಹಾಸಕ್ಕೆ 6 ತಿಂಗಳ ಮಗು ಬಲಿಯಾಗಿದೆ.
ಬೀದಿ ನಾಯಿಗಳು ಗುಡಿಸಲಿನಿಂದ 6 ತಿಂಗಳ ಮಗುವನ್ನು ಎಳೆದುತಂದು ಕಚ್ಚಿ ಹತ್ಯೆ ಮಾಡಿದೆ. ಪಾಲಕರು ಹಾಗೂ ಸ್ಥಳೀಯರು ಮಗುವನ್ನು ಹುಡುಕಲು ಆರಂಭಿಸಿದಾಗ ಅವರ ಗುಡಿಸಲು ಬಳಿ ಇರುವ ಪೊದೆಯಲ್ಲಿ ಶವ ಪತ್ತೆಯಾಗಿತ್ತು, ಕೈ ಸೇರಿದಂತೆ ಹಲವೆಡೆ ಕಚ್ಚಿದ ಗಾಯಗಳಿದ್ದವು. ಮಗುವಿನ ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಈ ಘಟನೆ ಬಳಿಕ ಮುನ್ಸಿಪಲ್ ಕಾರ್ಪೊರೇಷನ್ ಬೀದಿ ನಾಯಿಗಳನ್ನು ಹಿಡಿಯಲು ಯೋಜನೆಗಳನ್ನು ರೂಪಿಸಿದೆ.