ಮಧ್ಯ ಪ್ರದೇಶ: ಆನ್ಲೈನ್ ತರಗತಿಯಲ್ಲಿ ಭಾಗಿಯಾಗಿದ್ದ 15 ವರ್ಷದ ಬಾಲಕನೊಬ್ಬನ ಮೊಬೈಲ್ ಫೋನ್ ಸ್ಫೋಟಗೊಂಡ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ.ಎಂಟನೇ ತರಗತಿ ವಿದ್ಯಾರ್ಥಿಯಾದ ರಾಮ್ಪ್ರಕಾಶ್ ಭದೌರಿಯಾ ಆನ್ಲೈನ್ ಕ್ಲಾಸ್ನಲ್ಲಿ ಭಾಗಿಯಾಗಿದ್ದ ವೇಳೆ ಮೊಬೈಲ್ ಹೀಗೆ ಸ್ಫೋಟಗೊಂಡಿದೆ. ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿರುವ ಚಂಡುಕಿಯಾ ಗ್ರಾಮದಲ್ಲಿ ಈ ಘಟನೆ ಜರುಗಿದೆ.
ಬಾಲಕನ ದವಡೆಗೆ ಗಾಯಗಳಾಗಿದ್ದು, ಸ್ಫೋಟಗೊಂಡ ವೇಳೆ ಮನೆಯಲ್ಲಿ ಆತ ಒಬ್ಬನೇ ಇದ್ದ ಎಂದು ತಿಳಿದು ಬಂದಿದೆ.
ಸ್ಫೋಟದ ಸದ್ದಿಗೆ ಗಾಬರಿಗೊಂಡ ಅಕ್ಕ-ಪಕ್ಕದ ಮನೆಯವರು ಬಾಲಕನನ್ನು ರಕ್ಷಿಸಿದ್ದಾರೆ. ಮೊದಲಿಗೆ ಸತ್ನಾ ಜಿಲ್ಲಾಸ್ಪತ್ರೆಗೆ ಬಾಲಕನನ್ನು ಕರೆದೊಯ್ದಿದ್ದು, ಅಲ್ಲಿಂದ ಜಬಾಲ್ಪುರಕ್ಕೆ ಹೆಚ್ಚಿನ ಚಿಕಿತ್ಸೆಗೆ ಆತನನ್ನು ಕರೆದೊಯ್ಯಲಾಗಿದೆ.