ನವದೆಹಲಿ: ಟೀಮ್ ಇಂಡಿಯಾದ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಿಗೆ ವರ್ಷದ ಪಬ್ಟಿ ಪುರುಷ ಅಥ್ಲೀಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿ ಕೊಹ್ಲಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಹ್ಲಿ ಶೇ.78ರಷ್ಟು ಮತಗಳನ್ನು ಪಡೆದಿದ್ದು, 5 ಲಕ್ಷ ಜನರು ಈ ಪ್ರಶಸ್ತಿಗೆ ಮತ ಚಲಾಯಿಸಿದ್ದಾರೆ.
ಮೆಸ್ಸಿ ಕೇವಲ 22 ಪ್ರತಿಶತದಷ್ಟು ಮತಗಳನ್ನು ಪಡೆದರು. ಪಿಯುಬಿಟಿ ಸ್ಪೋರ್ಟ್ ಡಿ.31 ರಂದು ವಿಜೇತರನ್ನು ಘೋಷಿಸಿತು.
ನೊವಾಕ್ ಜೊಕೊವಿಕ್, ಕಾರ್ಲೋಸ್ ಅಲ್ಕರಾಜ್, ಲೆಬ್ರಾನ್ ಜೇಮ್ಸ್, ಮ್ಯಾಕ್ಸ್ ವೆರ್ಸ್ಟಾಪೆನ್ ಮತ್ತು ಲಿಯೋನೆಲ್ ಮೆಸ್ಸಿ ಅವರೊಂದಿಗೆ ಪುಬಿಟಿ ವರ್ಷದ ಪುರುಷ ಕ್ರೀಡಾಪಟು ಪ್ರಶಸ್ತಿಗಾಗಿ ಕಿಂಗ್ ಕೊಹ್ಲಿ ಸ್ಪರ್ಧಿಸಿದ್ದರು. ಕೊಹ್ಲಿ ಮತ್ತು ಮೆಸ್ಸಿಯನ್ನು ಅಂತಿಮ ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿತ್ತು.
𝗩𝗜𝗥𝗔𝗧 𝗞𝗢𝗛𝗟𝗜, 𝗬𝗢𝗨𝗥 𝗣𝗨𝗕𝗜𝗧𝗬 𝗦𝗣𝗢𝗥𝗧 𝗠𝗘𝗡'𝗦 𝗔𝗧𝗛𝗟𝗘𝗧𝗘 𝗢𝗙 𝗧𝗛𝗘 𝗬𝗘𝗔𝗥 🏆🔥
An amazing year for the Indian cricket legend, excelling across tests, to the World Cup and the IPL – shattering many records in the process.
The outright winner against… pic.twitter.com/x5yWudSWrv
— Pubity Sport (@pubitysport) December 31, 2023