ಎರ್ನಾಕುಲಂ: ಎರ್ನಾಕುಲಂನ ಕಳಮಶ್ಶೇರಿ ಎಂಬಲ್ಲಿ ಪ್ರಾರ್ಥನಾ ಸಭೆ ನಡೆಸುತ್ತಿದ್ದ ಜಾಗದಲ್ಲಿ ಸರಣಿ ಬಾಂಬ್ ಸ್ಪೋಟ ಸಂಭವಿಸಿ ಮೂವರು ಮೃತಪಟ್ಟಿದ್ದರು. ಇದೀಗ ಮತ್ತೆ ಕೇರಳದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.
ತಿರುವನಂತಪುರಂ ಬಳಿಯ ಪೆರುಮಾತುರದಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಮನೆಗಳ ಮೇಲೆ ನಾಡ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಅಟ್ಟಿಂಗಲ್ ನಿವಾಸಿಗಳಾದ ಸಫೀರ್, ಆಕಾಶ್ ಮತ್ತು ಅಬ್ದುಲ್ ರಹಿಮಾನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಸ್ಥಳೀಯರು ಕಾರಿನಲ್ಲಿ ಮದ್ಯ ಸೇವಿಸುತ್ತಿರುವುದನ್ನು ನೋಡಿ ಗ್ಯಾಂಗ್ ಒಂದು ಕೋಪಗೊಂಡಿತ್ತು ಮತ್ತು ದಾಂಧಲೆ ನಡೆಸಿತು. ಸಮೀಪದ ಮನೆಗಳಲ್ಲಿ ಆಶ್ರಯ ಪಡೆದ ಯುವಕರನ್ನು ತಂಡವು ಬೆನ್ನಟ್ಟಿತ್ತು, ಆಗ ದುಷ್ಕರ್ಮಿಗಳು ನಾಡ ಬಾಂಬ್ ಅನ್ನು ಅಲ್ಲಿದ್ದ ಮನೆಗಳ ಮೇಲೆ ಎಸೆದಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.