ಕೇರಳ: ಇತ್ತೀಚೆಗೆ ರಸ್ತೆ ನಿರ್ಮಾಣ ಸಂದರ್ಭ ಮರವೊಂದನ್ನು ಬೀಳಿಸಿದಾಗ ಅದರಲ್ಲಿದ್ದ ನೂರಾರು ಹಕ್ಕಿಗಳು ಮೃತಪಟ್ಟ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿ ಇಬ್ಬರ ಬಂಧನವಾಗಿದೆ. ಈ ಘಟನೆ ನಡೆದಿದ್ದು ಕೇರಳದ ಮಲಪ್ಪುರಂ ಜಿಲ್ಲೆಯ ರಂದ ಥಾಣೆ ಪ್ರದೇಶದಲ್ಲಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಿಂದ ನಡೆದ ಕಾಮಗಾರಿಯಲ್ಲಿ ಈ ರೀತಿ ಮಾಡಲಾಗಿದೆ.
ವೀಡಿಯೊದಲ್ಲಿ ಮರ ಬೀಳುವಾಗ ನೂರಾರು ಹಕ್ಕಿಗಳು ಅದರಿಂದ ಹಾರಿ ಹೋಗುವುದು ಮತ್ತು ಕೆಲವು ಗೂಡು ಹಾಗೂ ಮರಿಗಳು ಮರದೊಂದಿಗೆ ರಸ್ತೆಗೆ ಬಿದ್ದು ಸಾಯುವುದು ದೃಶ್ಯದಲ್ಲಿ ಕಂಡು ಬರುತಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಂತರ ಜನ ಶೇರ್ ಮಾಡಿ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವರದಿ ಕೊಡುವಂತೆ ರಾಜ್ಯ ಪಿಡಬ್ಲಿಡಿಯೂ ಸಚಿವರ ಪಿಎ ಮೊಹಮ್ಮದ್ ರಿಯಾಸ್ ಎನ್ ಎಚ್ ಐ ಎ ಗೆ ಕೇಳಿದ್ದಾರೆ.
ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ ಮರವನ್ನು ಬೀಳಿಸಿದ ಜೆಸಿಬಿ ಮತ್ತು ಅದರ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ