ಕೇರಳ: ಮಲಪ್ಪುರಂ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ರಸ್ತೆಯ ಹೊಂಡಗಳ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಶಾಸಕರ ಸಮ್ಮುಖದಲ್ಲಿ ನೀರು ನಿಂತ ಗುಂಡಿಯಲ್ಲಿ ಯೋಗಾಸನ ಮಾಡಿ ಸ್ನಾನ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಹಮ್ಜಾ ಪೊರಾಲಿ ಎಂದು ಗುರುತಿಸಲಾದ ವ್ಯಕ್ತಿ ಸ್ಥಳೀಯ ಶಾಸಕ ಯುಎ ಲತೀಫ್ ಅವರ ಮುಂದೆ ಮಡ್ ಯೋಗ ಮಾಡಿದ್ದಾನೆ. ಸ್ಥಳೀಯ ಮುಖಂಡರ ಕಾರು ಸ್ಥಳಕ್ಕೆ ಬಂದಾಗ, ಪೊರಾಲಿ ರಸ್ತೆ ಗುಂಡಿಯಲ್ಲಿ ಮಡ್ ಬಾಥ್ ಮಾಡಿದ್ದಾನೆ ಅಲ್ಲದೇ ಅದೇ ಗುಂಡಿಯಲ್ಲಿ ಬಟ್ಟೆ ಒಗೆದು ಆಕ್ರೋಶ ಹೊರಹಾಕಿದ್ದಾನೆ.
#WATCH | Kerala: A man in Malappuram protested against potholes on roads in a unique way by bathing & performing yoga in a water-logged pothole in front of MLA on the way pic.twitter.com/XSOCPrwD5f
— ANI (@ANI) August 9, 2022