News Karnataka Kannada
Monday, April 29 2024
ಕೇರಳ

11 ಮಹಿಳೆಯರ ಜೀವನವನ್ನೇ ಬದಲಿಸಿದ ಕೇರಳ ಲಾಟರಿ

Kerala lottery changed the lives of 11 women
Photo Credit : By Author

ಕೇರಳ: ಲಾಟರಿ ಟಿಕೆಟ್ ಖರೀದಿಸಿ ಎಷ್ಟೋ ಜನ ಮನೆ ಮಠ ಕಳೆದು ಕೊಂಡು ದಿವಾಳಿಯಾದ ಘಟನೆ ನಡೆದಿದೆ. ಆದರೆ ಇನ್ನೂ ಕೆಲವರಿಗೆ ಅದೃಷ್ಟ ಖುಲಾಯಿಸಿ ಶ್ರೀಮಂತರಾಗಿರುವ ಘಟನೆಯೂ ನಡೆದಿದೆ. ಈ ಅದೃಷ್ಟಕ್ಕೆ ಕೇರಳದ 11 ಮಹಿಳಾ ಪೌರ ಕಾರ್ಮಿಕರೇ ಸಾಕ್ಷಿಯಾಗಿದ್ದು ವಿಶೇಷ.

ಹೌದು,ಕೇರಳದಲ್ಲಿ ಇಂತಹ ರೋಚಕ ಘಟನೆ ವರದಿಯಾಗಿದ್ದು,ಕೇವಲ 250 ರೂಪಾಯಿ ಮೌಲ್ಯದ ಲಾಟರಿ ಟಿಕೆಟ್‌ ಖರೀದಿಸಿದ್ದು,೧೧ ಮಂದಿ ಪೌರ ಕಾರ್ಮಿಕರಿಗೆ 10 ಕೋಟಿ ರೂ. ಬಂಪರ್‌ ಲಾಟರಿ ಹೊಡೆದಿದೆ.ಈ ಮೂಲಕ ಇತರರು ಹಬ್ಬೇರಿಸುವಂತೆ ಮಾಡಿದ್ದಾರೆ.ನಿನ್ನೆ-ಮೊನ್ನೆಯ ತನಕ ಪುರಸಭೆ ವ್ಯಾಪ್ತಿಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯರೀಗ ಅದೃಷ್ಟಲಕ್ಷ್ಮೀಯರಾಗಿದ್ದು ಆಶ್ಚರ್ಯಕಾರಿ ವಿಷಯ.

ಮಲಪ್ಪುರಂ ಜಿಲ್ಲೆ ಪರಪ್ಪನಂಗಡಿ ಪುರಸಭೆಯ ಹರಿತಾ ಕರ್ಮ ಸೇನಾದ 11 ಮಹಿಳಾ ಕಾರ್ಮಿಕರು ಈಗ ಅದೃಷ್ಟದ ಕದ ತಟ್ಟಿದವರು.ಇವರು 2023ರ ಮುಂಗಾರು ಬಂಪರ್‌ ಲಾಟರಿ (Monsoon Bumper) ಖರೀದಿಸಿದ್ದು, 250 ರೂಪಾಯಿಯ ಲಾಟರಿ ಟಿಕೆಟ್‌ ಈಗ ಅವರ ಜೀವನವನ್ನೇ ಬದಲಿಸುವಂತೆ ಮಾಡಿದೆ. ಈ ಬಗ್ಗೆ ಮಹಿಳೆಯವರು ಕೂಡ ಫುಲ್ ಹ್ಯಾಪಿಯಾಗಿದ್ದಾರೆ. ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ.ಇದುವರೆಗೆ ಇವರು ಮೂರು ಬಾರಿ ಲಾಟರಿ ಟಿಕೆಟ್‌ ಖರೀದಿಸಿದ್ದರೂ ಅದೃಷ್ಟ ಬಾರದೇ ಈಗ ನಾಲ್ಕನೇ ಬಾರಿ ಖರೀದಿಸಿದಾಗ ಅದೃಷ್ಟ ಖುಲಾಯಿಸಿದೆ.

11 ಮಹಿಳಾ ಕಾರ್ಮಿಕರಲ್ಲಿ ರಾಧಾ ಎಂಬುವರು ಹೀಗೆ ಮಾತನಾಡುತ್ತಾ ಲಾಟರಿ ಟಿಕೆಟ್‌ ಖರೀದಿಸೋಣವೇ ಎಂದು ಹೇಳಿದ್ದು ಅವರೆಲ್ಲರೂ ಈಗ ಕೋಟ್ಯಾಧೀಶೆಯರಾಗಿದ್ದಾರೆ. ಟಿಕೆಟ್ ಖರೀದಿಸುವ ಮುಂಚೆ ಮಹಿಳಾ ಕಾರ್ಮಿಕರು ಒಪ್ಪಿಗೆ ಸೂಚಿಸಿದ್ದು, ಎಲ್ಲರೂ ಒಂದಿಷ್ಟು ಮೊತ್ತ ಹಾಕಿ 250 ರೂ. ಕಲೆಕ್ಟ್ ಮಾಡಿ ಟಿಕೆಟ್ ಖರೀದಿಸಿದ್ದಾರೆ.ಈಗ ಅವರಿಗೆ 10 ಕೋಟಿ ರೂ. ಬಂದಿದ್ದು ಅವರ ಜೀವನವನ್ನೇ ಬದಲಾಯಿಸಿದೆ. ಲಾಟರಿಯ 10 ಕೋಟಿ ರೂಪಾಯಿಯಲ್ಲಿ ಏಜೆಂಟ್‌ ಕಮಿಷನ್‌ ಹಾಗೂ ಆದಾಯ ತೆರಿಗೆ ಕಡಿತವಾಗಿ 11 ಮಹಿಳೆಯರಲ್ಲಿ ಒಬ್ಬ ಮಹಿಳೆಯ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು