News Karnataka Kannada
Saturday, April 27 2024
ಕೇರಳ

ರಬ್ಬರ್‌ ದರ 300ಕ್ಕೇರಿಸಿದರೆ ಕೇರಳದಿಂದ ಬಿಜೆಪಿ ಎಂಪಿ: ಸಂಚಲನಕ್ಕೆ ಕಾರಣವಾದ ಧರ್ಮಗುರು ಹೇಳಿಕೆ

'If rubber price is raised to Rs 300/kg, BJP will get MP from Kerala,' says Bishop
Photo Credit : IANS

ತಿರುವನಂತಪುರಂ: ಕೇಂದ್ರ ಸರ್ಕಾರ ರಬ್ಬರ್ ಬೆಲೆಯನ್ನು ಕಿಲೋಗ್ರಾಂಗೆ 300 ರೂ.ಗೆ ಏರಿಸಿದರೆ, ಚರ್ಚ್ ಕೇರಳದಿಂದ ಬಿಜೆಪಿ ಎಂಪಿ ಆಯ್ಕೆಯಾಗಲು ಬಿಜೆಪಿಗೆ ಸಹಾಯ ಮಾಡುತ್ತೇವೆ ಎಂದು ರೋಮನ್ ಕ್ಯಾಥೋಲಿಕ್ ಚರ್ಚ್‌ ತಲಸ್ಸೆರಿ ಆರ್ಚ್ ಬಿಷಪ್ ಮಾರ್ ಜೋಸೆಫ್ ಪಾಂಪ್ಲಾನಿ ಹೇಳಿದ್ದಾರೆ.

ಭಾನುವಾರ ತಲಶ್ಶೇರಿ ಆರ್ಚ್ ಡಯಾಸಿಸ್‌ನ ಕ್ಯಾಥೋಲಿಕ್ ರೈತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಕ್ಯಾಥೋಲಿಕ್ ಚರ್ಚ್ ರಾಜಕೀಯ ನಿರ್ಧಾರದ ಹಿಂದೆ ಪ್ರಮುಖ ಪಾತ್ರ ವಹಿಸುತ್ತಿದ್ದು, ರಾಜ್ಯದ ಹೆಚ್ಚಿನ ರಬ್ಬರ್ ತೋಟಗಳು ಕ್ಯಾಥೋಲಿಕ್ ರೈತರ ಒಡೆತನದಲ್ಲಿದೆ. ಡಿಸೆಂಬರ್ 2022 ಮತ್ತು ಮಾರ್ಚ್ 2023 ರ ನಡುವೆ ರಬ್ಬರ್ ಪ್ರತಿ ಕೆಜಿಗೆ ರೂ 131 ರಿಂದ ರೂ 151 ರ ನಡುವೆ ಮಾರಾಟವಾಗುತ್ತಿದೆ.

ಕ್ಯಾಥೋಲಿಕ್ ಬಿಷಪ್ ಅವರ ಈ ಬಹಿರಂಗ ಹೇಳಿಕೆಯು ಕೇರಳದ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಕೇರಳದ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಮಹಮ್ಮದ್‌ ರಿಯಾಜ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ನಾನು ಬಿಷಪ್ ಅವರ ಹೇಳಿಕೆ ಗಮನಿಸಿಲ್ಲ. ಹೇಳಿಕೆ ಬಗ್ಗೆ ಗಮನಿಸಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಜಾಗರೂಕ ಉತ್ತರ ನೀಡಿದ್ದಾರೆ.

ಆರ್‌ಎಸ್‌ಎಸ್ 2025ರಲ್ಲಿ ಶತಮಾನೋತ್ಸವ ಆಚರಿಸುತ್ತಿದ್ದು, ದೇಶವನ್ನು ಹಿಂದು ರಾಷ್ಟ್ರ ಮಾಡುವ ಗುರಿ ಹೊಂದಿದೆ. ಇದರಿಂದ ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ದೇಶದ ಅಲ್ಪಸಂಖ್ಯಾತರು ಭಯದಲ್ಲಿದ್ದಾರೆ ಎಂದು ಸಚಿವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು