News Karnataka Kannada
Saturday, April 20 2024
Cricket
ಕೇರಳ

ತೆರಿಗೆ ಕಟ್ಟದೇ ಮಹಾಮೋಸ: ಯೂಟ್ಯೂಬರ್‌ ಪರ್ಲಿ ಮಾನಿ ಮನೆ ಮೇಲೆ ಐಟಿ ದಾಳಿ

I-T raids youtuber Pearle Mani's house for non-payment of taxes
Photo Credit : IANS

ಕೊಚ್ಚಿ: ಕೇರಳದಲ್ಲಿ ಐಟಿ ಅಧಿಕಾರಿಗಳು ಯೂಟ್ಯೂಬರ್ಸ್ ಮನೆ ಮೇಲೆ ದಾಳಿ ಮಾಡಿದ್ದು, ತೆರಿಗೆ ಕಟ್ಟದ ಯೂಟ್ಯೂಬರ್ಸ್ ಗೆ ಚಳಿ ಬಿಡಿಸಿದ್ದಾರೆ. ಈ ವೇಳೆ ಕೆಲವರಿಗೆ ನೋಟಿಸ್ ಕೂಡ ನೀಡಿದ್ದಾರೆ ಎನ್ನಲಾಗಿದೆ. ಈ ಯೂಟ್ಯೂಬರ್ಸ್ ಗಳಲ್ಲಿ ನಟಿ ಪರ್ಲಿ ಮಾನಿ ಕೂಡ ಇದ್ದಾರೆ ಎಂದು ತಿಳಿದು ಬಂದಿದೆ.

ಐಟಿ ಅಧಿಕಾರಿಗಳು ರಾಜ್ಯದ 13 ಯೂಟ್ಯೂಬರ್ಸ್​ ಮನೆ ಮತ್ತು ಕಚೇರಿಗಳನ್ನು ಮಾತ್ರ ಪರಿಶೀಲಿಸಿದ್ದು,ಇದರಲ್ಲಿ ನಟಿ ಪರ್ಲಿ ಮಾನಿ ಕೂಡ ಇದ್ದಾರೆ. ಐಟಿ ಇಲಾಖೆಯು ತನ್ನ ತೆರಿಗೆ ತಪಾಸಣೆಯನ್ನು ರಾಜ್ಯದ ಹೆಚ್ಚಿನ ಯೂಟ್ಯೂಬರ್ಸ್​ಗೆ ವಿಸ್ತರಿಸುವ ಸುಳಿವು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯೂಟ್ಯೂಬರ್ಸ್​ ಮನೆಗಳ ಮೇಲೆ ದಾಳಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇರಳದ ಐಟಿ ಅಧಿಕಾರಿಗಳು ನಿನ್ನೆ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದು, ಕೇರಳದ ಪ್ರಸಿದ್ಧ ಯೂಟ್ಯೂಬರ್ಸ್ ಗಳನ್ನು ಬೆಚ್ಚಿ ಬೀಳಿಸಿದ್ದಾರೆ.ಐಟಿ ಇಲಾಖೆಯ ಅಧಿಕಾರಿಗಳು, ನಟಿ ಮತ್ತು ಆಂಕರ್ ಪರ್ಲೆ ಮಾನಿ, ಫಿಶಿಂಗ್ ಫ್ರೀಕ್ಸ್ (ಸೆಬಿನ್), ಎಂ4ಟೆಕ್, ಆರ್ಜ್ಯೂ, ಕಾಲ್ಮೆಶಜ್ಜಮ್, ಅಖಿಲ್ ಎನ್‌ಆರ್‌ಡಿ, ಜಯರಾಜ್ ಜಿ ನಾಥ್, ಅನ್‌ಬಾಕ್ಸಿಂಗ್ ಡ್ಯೂಡ್, ರೈಸಿಂಗ್ ಸ್ಟಾರ್, ಈಗಲ್ ಗೇಮಿಂಗ್ ಮತ್ತು ಕಾಜ್ಟ್ರೋ ಗೇಮಿಂಗ್ ಯೂಟ್ಯೂಬರ್ಸ್​ ಮನೆಗಳ ಮೇಲೆ ದಾಳಿ ನಡೆಸಿದರು. ಈ ಸಂದರ್ಭ ಅಧಿಕಾರಿಗಳು ಪರಿಶೀಲನೆ ಮಾಡಿರುವ ಪ್ರಸಿದ್ಧರ ಪೈಕಿ ನಟಿ ಪರ್ಲಿ ಮಾನಿ ಮನೆ ಕೂಡ ಇದೆ. ಪರ್ಲಿ ಕೇರಳದ ಪ್ರಸಿದ್ದ ನಟಿ, ನಿರೂಪಕಿ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು