News Karnataka Kannada
Monday, April 29 2024
ಕೇರಳ

ದೇವಸ್ಥಾನದ ಆವರಣದಲ್ಲಿ ಸಿ‍ಪಿಐ(ಎಂ) ನಾಯಕನ ಕೊಚ್ಚಿ ಕೊಲೆ

ಕೊಯಿಲಾಂಡಿ ಸಮೀಪದ ದೇಗುಲದ ಆವರಣದಲ್ಲಿ ಸಿಪಿಐ (ಎಂ) ನಾಯಕರೊಬ್ಬರನ್ನು ನೆರೆ ಮನೆಯ ವ್ಯಕ್ತಿಯೇ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿ.ವಿ ಸತ್ಯನಾಥ್ (60) ಅವರ ಮೇಲೆ ಆಯುಧದಿಂದ ಹಲ್ಲೆ ಮಾಡಿದ್ದಾನೆ. ಗುರುವಾರ ರಾತ್ರಿ 10.30ರ ವೇಳೆಗೆ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಕಾರಣಗಳಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ.
Photo Credit : News Kannada

ಕೋಯಿಕ್ಕೋಡ್‌: ಕೊಯಿಲಾಂಡಿ ಸಮೀಪದ ದೇಗುಲದ ಆವರಣದಲ್ಲಿ ಸಿಪಿಐ (ಎಂ) ನಾಯಕರೊಬ್ಬರನ್ನು ನೆರೆ ಮನೆಯ ವ್ಯಕ್ತಿಯೇ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿ.ವಿ ಸತ್ಯನಾಥ್ (60) ಅವರ ಮೇಲೆ ಆಯುಧದಿಂದ ಹಲ್ಲೆ ಮಾಡಿದ್ದಾನೆ. ಗುರುವಾರ ರಾತ್ರಿ 10.30ರ ವೇಳೆಗೆ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಕಾರಣಗಳಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302 ಸೇರಿ ಹಲವು ‘ಕಲಂ’ಗಳಡಿ ದೂರು ದಾಖಲಿಸಲಾಗಿದೆ. ಉತ್ಸವ ನಡೆಯುತ್ತಿದ್ದ ವೇಳೆ ದೇವಸ್ಥಾನದ ಒಳಗೇ ಸತ್ಯನಾಥ್‌ ಅವರಿಗೆ ಅಭಿಲಾಷ್ ಇರಿದಿದ್ದ. ಬಳಿಕ ಬಂದು ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ. ಆತನನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಏತನ್ಮಧ್ಯೆ ಕೊಯಿಲಾಂಡಿಯಲ್ಲಿ ಸಿಪಿಐ(ಎಂ) ಪ್ರತಿಭಟನೆಗೆ ಕರೆ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು