ಕೇರಳ: ಮತ್ತೆ ಕೇರಳ ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿದೆ. ಡಿಸೆಂಬರ್ ತಿಂಗಳ ಮೊದಲ ಎಂಟು ದಿನದಲ್ಲಿ 825 ಹೊಸ ಕೇಸ್ ಪತ್ತೆಯಾಗಿದೆ.
ನವೆಂಬರ್ ಇಡೀ ತಿಂಗಳಲ್ಲಿ 479 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ಕೋವಿಡ್ ಸೊಂಕಿತ ಸಾವನ್ನಪ್ಪಿದ್ದಾನೆ. ಕೇರಳದಲ್ಲಿ ಕೊರೋನಾ ಹೆಚ್ಚುತ್ತಿರೋದ್ರಿಂದ ಗಡಿಭಾಗದಲ್ಲೂ ಆತಂಕ ಸೃಷ್ಟಿಯಾಗಿದೆ.
ದೇಶದಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಕೇರಳದಲ್ಲಿ ದಾಖಲಾಗಿದೆ. ಕೇರಳದಲ್ಲಿ ಪತ್ತೆಯಾದ ಸೋಂಕು ಕೋವಿಡ್ ಸಬ್ ವೇರಿಯಂಟ್ JN.1 ಎಂದು ದೃಡಪಟ್ಟಿದೆ. ಈ ಸೊಂಕು ತುಂಬಾ ತೀವ್ರವಾಗಿಲ್ಲ,ಸಾವುಗಳ ಸಂಖ್ಯೆ ಕಡಿಮೆ ಇದೆ.
ಹೀಗಾಗಿ ಈ ಸೊಂಕು ನಿರ್ವಹಿಸಬಹುದು ಎಂದಿರುವ ಆರೋಗ್ಯ ಇಲಾಖೆ ತಿಳಿಸಿದೆ.