Categories: ಕೇರಳ

ಇಸ್ಲಾಂಗೆ ಮತಾಂತರಗೊಂಡು ಸುದ್ದಿಯಾಗಿದ್ದ “ಹದಿಯಾ ಪ್ರಕರಣ’ಕ್ಕೆ ಹೊಸ ತಿರುವು

ತಿರುವನಂತಪುರ: ಲವ್ ಜಿಹಾದ್ ಕಾರಣಕ್ಕೆ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಕೇರಳದ ಅಖಿಲಾ ಅಲಿಯಾಸ್ ಹದಿಯಾ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾಳೆ. ತನ್ನ ಮಗಳು ನಾಪತ್ತೆಯಾಗಿದ್ದಾಳೆ. ಆಕೆಯನ್ನು ಹುಡುಕಿ ಕೊಡಬೇಕೆಂದು ತಂದೆ ಅಶೋಕನ್ ಎರಡನೇ ಬಾರಿಗೆ ಹೈಕೋರ್ಟ್ ಮೆಟ್ಟಿಲೇರಿದ್ದರೆ, ಇತ್ತ ವಿಡಿಯೋ ಬಿಡುಗಡೆ ಮಾಡಿರುವ ಹದಿಯಾ ತಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾಳೆ.

2016ರಲ್ಲಿ ಕೊಯಮತ್ತೂರಿನ ವೈದ್ಯಕೀಯ ಕಾಲೇಜಿನಲ್ಲಿ ಕಲಿಯುತ್ತಿದ್ದ ಕೊಟ್ಟಾಯಂ ಮೂಲದ ಅಖಿಲಾ ಬಳಿಕ ಇಸ್ಲಾಂಗೆ ಮತಾಂತರಗೊಂಡು ತನ್ನ ಸಹಪಾಠಿ ಶಾಹೀನ್ ಸಫೀನ್ ಎಂಬಾತನನ್ನು ಮದುವೆಯಾಗಿದ್ದಳು. ಈ ಕುರಿತ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆನಂತರ, ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಎನ್‌ಐಎ ತನಿಖೆಯನ್ನೂ ನಡೆಸಿದ್ದು, ಇದರಲ್ಲಿ ಯಾವುದೇ ಲವ್ ಜಿಹಾದ್ ಕೃತ್ಯ ಕಂಡುಬಂದಿಲ್ಲ ಎಂದು ರಿಪೋರ್ಟ್ ನೀಡಿತ್ತು. ಅಲ್ಲದೆ, ಹದಿಯಾ ಎಂದು ಬದಲಾಗಿದ್ದ ಅಖಿಲಾ ತನ್ನ ಮದುವೆ, ಖಾಸಗಿತನದ ಬಗ್ಗೆ ನಿರ್ಧರಿಸಲು ಸ್ವತಂತ್ರಳಿದ್ದೇನೆ ಎಂದು ಹೇಳಿಕೆ ನೀಡಿ, ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ್ದಳು. ಕೇರಳದಲ್ಲಿ ಲವ್ ಜಿಹಾದ್ ಕೃತ್ಯಗಳು ಹೆಚ್ಚುತ್ತಿವೆ ಎನ್ನುವ ಆರೋಪಕ್ಕೆ ಈಕೆಯ ಹೇಳಿಕೆ ದೊಡ್ಡ ಹಿನ್ನಡೆಯಾಗಿತ್ತು ಆಕೆಯ ಹೇಳಿಕೆಯಂತೆ, ಗಂಡನ ಜೊತೆ ಬದುಕಲು ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು.

ಕೇರಳ ಹೈಕೋರ್ಟ್ ಜಟಾಪಟಿ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕವೂ ಹದಿಯಾ ತನ್ನ ಪಟ್ಟು ಸಡಿಲಿಸಿರಲಿಲ್ಲ. ತಾನು ಪ್ರೀತಿಸಿದ್ದ ಶಫೀನ್ ಜಹಾನ್ ಜೊತೆಗೆ ಬದುಕಲು ಬಿಡಬೇಕೆಂದು ಕೇಳಿಕೊಂಡಿದ್ದಳು. ಅದರಂತೆ, 2019ರಲ್ಲಿ ಮಲಪ್ಪುರಂನಲ್ಲಿ ತನ್ನದೇ ಹೋಮಿಯೋಪತಿಕ್ ಕ್ಲಿನಿಕ್ ತೆರೆದು ಬದುಕು ಆರಂಭಿಸಿದ್ದಳು. 2016ರಲ್ಲಿಯೂ ತಂದೆ ಅಶೋಕನ್ ತನ್ನ ಮಗಳನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ, ಲವ್ ಜಿಹಾದ್ ಕೃತ್ಯದ ಸಂಶಯದಲ್ಲಿ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು. ಆದರೆ ಲವ್ ಜಿಹಾದ್ ಆರೋಪದ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಬಿದ್ದು ಹೋಗಿದ್ದರಿಂದ ಹೈಕೋರ್ಟ್ ಕೇಸು ಕೂಡ ವಜಾಗೊಂಡಿತ್ತು. ಇತ್ತೀಚೆಗೆ ಹಾದಿಯಾ ತನ್ನ ಪತಿ ಶಫೀನ್ ಗೆ ಡೈವರ್ಸ್ ನೀಡಿದ್ದಾಳೆ ಎಂಬ ಸುದ್ದಿ ಹಬ್ಬಿತ್ತು. ಅಲ್ಲದೆ, ಆಕೆ ಮತ್ತೊಬ್ಬ ಮುಸ್ಲಿಂ ಯುವಕನನ್ನು ಮರು ಮದುವೆಯಾಗಿದ್ದಾಳೆ’ಎಂದೂ ಹೇಳಲಾಗಿತ್ತು.

ಈಗ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹದಿಯಾ ತನ್ನ ಎರಡನೇ ಮದುವೆ ಬಗ್ಗೆಯೂ ಹೇಳಿಕೊಂಡಿದ್ದು, ನಾನು ಮುಸ್ಲಿಂ ಆಗಿ ಸುಖವಾಗಿದ್ದೇನೆ. ಮೊದಲ ಗಂಡನಿಗೆ ಡೈವರ್ಸ್ ನೀಡಿದ್ದೇನೆ. ಮತ್ತೊಬ್ಬ ಮುಸ್ಲಿಂ ಯುವಕನನ್ನು ಎರಡನೇ ಮದುವೆಯಾಗಿದ್ದೇನೆ. ಈ ವಿಚಾರ ತನ್ನ ಹೆತ್ತವರಿಗೂ ತಿಳಿದಿದೆ ಎಂದು ಹೇಳಿದ್ದಾಳೆ. ನನ್ನ ಹೆತ್ತವರು ನನ್ನೊಂದಿಗೆ ನಿರಂತರ ಸಂಪರ್ಕದಲ್ಲೇ ಇದ್ದರು. ಆದರೆ ತಂದೆಯನ್ನು ಸಂಘ ಪರಿವಾರದ ಕೆಲವೊಂದು ಶಕ್ತಿಗಳು ತಮಗೆ ಬೇಕಾದ ರೀತಿ ಬಳಸಿಕೊಳ್ಳುತ್ತಿವೆ ಎಂದೂ ಹದಿಯಾ ಇತ್ತೀಚೆಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಳು. ಅಶೋಕನ್ ಎರಡನೇ ಬಾರಿಗೆ ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣದ ವಿಚಾರಣೆ ಇನ್ನೂ ನಡೆದಿಲ್ಲ. ಇದರ ನಡುವೆ, ಆಕೆಯ ಹೇಳಿಕೆಯ ವಿಡಿಯೋ ಬಂದಿದ್ದು ಕೇರಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Umesha HS

Recent Posts

ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿ ನಿರ್ಮಿಸಲು ಮುಂದಾದ ಮದ್ರಾಸ್ ಐಐಟಿ-ಶ್ಲಾಘಿಸಿದ ಆನಂದ್ ಮಹೀಂದ್ರಾ

ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸುತ್ತಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‍ನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು…

10 mins ago

ಜಮ್ಮು –ಕಾಶ್ಮೀರ : ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್)…

20 mins ago

ನೂಕುನುಗ್ಗಲಿನಲ್ಲೂ ಪಾದಯಾತ್ರೆ ಹೊರಟ ಭಕ್ತರು : ವಿಡಿಯೋ ವೈರಲ್‌

ಯಮುನೋತ್ರಿ, ಗಂಗೋತ್ರಿ, ಕೇದರ್‌ನಾಥ್‌ ಮತ್ತು ಬದರಿನಾಥ್‌ ಪವಿತ್ರ ಚಾರ್‌ ಧಾಮ್‌ ಯಾತ್ರೆಯ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಜಮಾಯಿಸಿದ ಪರಿಣಾಮ…

39 mins ago

ಕೆಂಪು ಲಿಪ್​ ಸ್ಟಿಕ್ ಬಳಕೆ ಮೇಲೆ ನಿಷೇಧ ವಿಧಿಸಿದ ಉತ್ತರ ಕೊರಿಯಾ: ಹಚ್ಚಿದರೆ ಕಠಿಣ ಶಿಕ್ಷೆ!

ಮಹಿಳೆಯರು ತುಟಿಗೆ ಹಚ್ಚುವ ಕೆಂಪು ಲಿಪ್​  ಸ್ಟಿಕ್ ಬಳಕೆಯ ಮೇಲೆ ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾದ ನಿಷೇಧ ವಿಧಿಸಿದೆ.

39 mins ago

ಬಸವೇಶ್ವರ ಜಾತ್ರೆ: ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಜಿಲ್ಲೆಯ ಸೊನ್ನ ಗ್ರಾಮದ ಶಿವುಕುಮಾರ ಮಾಸ್ತಾರ ದಂಪತಿಗಳ ಸಹಾಯಾರ್ಥದೊಂದಿಗೆ ಗ್ರಾಮದ ಸುಮಾರು 200 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ವಿಶ್ವರಾಧ್ಯ…

58 mins ago

ಬಿಜೆಪಿ ಮತ್ತೆ ಗೆದ್ದರೆ ವಿಪಕ್ಷಗಳ ನಾಯಕರು ಜೈಲು ಪಾಲಾಗುತ್ತಾರೆ: ಕೇಜ್ರಿವಾಲ್‌

ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯು ಬಿಜೆಪಿ ಗೆದ್ದರೆ, ಮಮತಾ ಬ್ಯಾನರ್ಜಿ, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಆರ್‌ಜೆಡಿ ನಾಯಕ ತೇಜಸ್ವಿ…

1 hour ago