News Karnataka Kannada
Monday, April 29 2024
ಕೇರಳ

10 ಕೋಟಿ ರೂ. ಬಂಪರ್‌ ಲಾಟರಿ ಗೆದ್ದ ಆಟೋ ಚಾಲಕ

ಕೇರಳದ ಬಂಪರ್‌ ಸಮ್ಮರ್‌ ಲಾಟರಿಯಲ್ಲಿ 10 ಕೋಟಿ ರೂ. ಬಂಪರ್‌ ಲಾಟರಿ ಹೊಡೆದ ಕೇರಳದ ಕಣ್ಣೂರಿನ ಕಾರ್ತಿಕಾಪುರಂನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಜರ್‌ ಅವರು ರಾತ್ರೋರಾತ್ರಿ ಕೋಟ್ಯಧೀಶರಾಗಿದ್ದಾರೆ.
Photo Credit : NewsKarnataka

ತಿರುವನಂತಪುರಂ: ಕೇರಳದ ಬಂಪರ್‌ ಸಮ್ಮರ್‌ ಲಾಟರಿಯಲ್ಲಿ 10 ಕೋಟಿ ರೂಪಾಯಿಯನ್ನು  ಕೇರಳದ ಕಣ್ಣೂರಿನ ಕಾರ್ತಿಕಾಪುರಂನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಜರ್‌ ಅವರು ಗೆದ್ದು ರಾತ್ರೋರಾತ್ರಿ ಕೋಟ್ಯಧೀಶರಾಗಿದ್ದಾರೆ.

ನಜರ್‌ ಅವರು ಮಾಧ್ಯಮದ ಜೊತೆ ಮಾತನಾಡಿ, “ನನಗೆ ಲಾಟರಿ ಬಹುಮಾನ ಸಿಕ್ಕಿದೆ ಎಂಬ ಸುದ್ದಿ ತಿಳಿದು ಶಾಕ್‌ ಆಯಿತು. ಈಗಲೂ ನಾನು ಈ ಸುದ್ದಿಯ ಗುಂಗಿನಿಂದ ಹೊರಬಂದಿಲ್ಲ” ಎಂದು ತಿಳಿಸಿದರು.

ಕೇರಳದಲ್ಲಿ ರಾಜ್ಯ ಸರ್ಕಾರವೇ ಪ್ರಮುಖ ಹಬ್ಬಗಳು ಸೇರಿ ಹಲವು ಸಂದರ್ಭಗಳಲ್ಲಿ ಲಾಟರಿ ಆಯೋಜನೆ ಮಾಡುತ್ತದೆ. ಬೇಸಿಗೆ ಬಂಪರ್‌ ಲಾಟರಿಗೆ ಈ ಬಾರಿ ಸುಮಾರು 36 ಲಕ್ಷ ಲಾಟರಿ ಟಿಕೆಟ್‌ಗಳನ್ನು ಪ್ರಿಂಟ್‌ ಮಾಡಲಾಗಿತ್ತು. ಅವುಗಳಲ್ಲಿ 33.5 ಲಕ್ಷ ಟಿಕೆಟ್‌ಗಳಲ್ಲಿ ಮಾರಾಟ ಮಾಡಲಾಗಿದೆ. ಇದರಲ್ಲಿ ಮೊದಲ ಬಹುಮಾನವಾಗಿ 10 ಕೋಟಿ ರೂ. ಗೆದ್ದ ನಜರ್‌ ಅವರ ಕುಟುಂಬಸ್ಥರು . ಸಂತಸ ವ್ಯಕ್ತಪಡಿಸಿದ್ದು, ಟ್ಯಾಕ್ಸ್‌ ಕಡಿತಗೊಂಡು ಉಳಿದ ಮೊತ್ತ ಗೆದ್ದವರ ಕೈ ಸೇರಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು