ತಿರುವನಂತಪುರಂ(ಕೇರಳ) : ರಾಜ್ಯ ರಾಜಧಾನಿಯ ಸಮೀಪದ ಪೂವರ್ ಎಂಬಲ್ಲಿನ ರೆಸಾರ್ಟ್ನಲ್ಲಿ ರಾತ್ರಿಯಿಂದ ಬೆಳಗ್ಗಿನವರೆಗೂ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಭಾನುವಾರ ಮುಂಜಾನೆ ಕೇರಳ ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿದರು. ಬೆಂಗಳೂರಿಗರು ಸೇರಿ 25ಕ್ಕೂ ಹೆಚ್ಚು ಜನರ ಬಂಧನ ರಾತ್ರಿಯಿಡೀ ನಡೆದ ರೇವ್ ಪಾರ್ಟಿಯಲ್ಲಿ ಬೆಂಗಳೂರು, ಕೇರಳ ಮತ್ತು ಹೊರ ರಾಜ್ಯದವರೂ ಪಾಲ್ಗೊಂಡಿದ್ದು, 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ವೇಳೆ, ಪಾರ್ಟಿಯಲ್ಲಿ ಸುಮಾರು 65ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ನಿಷೇಧಿತ ಮಾದಕ ವಸ್ತುಗಳಾದ ಹಶಿಶ್, ಎಂಡಿಎಂಎ ಸೇರಿದಂತೆ ಇತರೆ ಅಮಲು ಪದಾರ್ಥಗಳನ್ನು ಬಳಸುತ್ತಿದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಮಹಿಳೆಯರೂ ಸೇರಿದಂತೆ ಇಪ್ಪತ್ತೈದು ಮಂದಿಯನ್ನು ಬಂಧಿಸಲಾಗಿದೆ. ರೇವ್ ಪಾರ್ಟಿಯಲ್ಲಿ ಕೇರಳ ಮತ್ತು ಬೆಂಗಳೂರು ಸೇರಿದಂತೆ ಹೊರ ರಾಜ್ಯದ ಅನೇಕರು ಭಾಗವಹಿಸಿದ್ದರು. ಈ ಪಾರ್ಟಿ ಹಿಂದೆ ದಂಧೆಕೋರರ ಕೈವಾಡವಿದ್ದು, ಸ್ಥಳದಿಂದ ಬಂಧಿಸಲ್ಪಟ್ಟವರಲ್ಲಿ ಕೆಲವರು ಭಾಗಿಯಾಗಿರುವ ಶಂಕೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.