Categories: ಕೇರಳ

ರಾಹುಲ್‌ ಗಾಂಧಿ ಸಂಸತ್ ಕ್ಷೇತ್ರಕ್ಕೆ ಇಂದು ಸಚಿವೆ ಸ್ಮೃತಿ ಇರಾನಿ ಭೇಟಿ!

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಕ್ಷೇತ್ರ ಕೇರಳದ ವಯನಾಡ್‌ಗೆ ಭೇಟಿ ನೀಡಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ.

“ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಸಭೆಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾನು ಶೀಘ್ರದಲ್ಲೇ ಅಲ್ಲಿಗೆ ಬರುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. ದಿನಪೂರ್ತಿ ಕ್ಷೇತ್ರದಲ್ಲಿರಲಿದ್ದು, ಈ ಸಂದರ್ಭದಲ್ಲಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ, ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಮತ್ತು ಬುಡಕಟ್ಟು ಮುಖಂಡರು ಸೇರಿದಂತೆ ಜನರನ್ನು ಭೇಟಿ ಮಾಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕ ತಿಳಿಸಿದೆ. ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಎಸ್‌ಸಿ/ಎಸ್‌ಟಿ ಸದಸ್ಯರಿದ್ದಾರೆ.

2019 ರ ಲೋಕಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅಮೇಥಿ ಕ್ಷೇತ್ರದಿಂದ ಇರಾನಿ ಅವರು ಭಾರೀ ಅಂತರದಿಂದ ಸೋಲಿಸಿದ್ದರು, ಆದರೆ ರಾಹುಲ್‌ ತಮ್ಮ ಎರಡನೇ ಸ್ಥಾನವಾದ ವಯನಾಡ್‌ನಿಂದ ಭಾರಿ ಬಹುಮತದೊಂದಿಗೆ ಸಂಸತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.

ಜಿಲ್ಲೆಯು ಅಭಿವೃದ್ಧಿಯಲ್ಲಿ ಹಿಂದುಳಿದಿರುವಿಕೆಯನ್ನು ಎತ್ತಿ ಹಿಡಿದು ಕೇಂದ್ರದಿಂದ ಕ್ಷೇತ್ರಕ್ಕೆ ನೀಡಿರುವ ಅಭಿವೃದ್ಧಿ ಯೋಜನೆಗಳ ಕುರಿತು ಸುದೀರ್ಘವಾಗಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಆಡಳಿತಾರೂಢ ಸಿಪಿಐ(ಎಂ) ಪಕ್ಷವು ಕೇಂದ್ರದ ಅಭಿವೃದ್ಧಿ ಕಾರ್ಯಕ್ರಮಗಳ ಹೆಸರುಗಳನ್ನು ಬದಲಿಸಿ ರಾಜ್ಯ ಸರ್ಕಾರದ ಅನುದಾನಿತ ಕಾರ್ಯಕ್ರಮಗಳೆಂದು ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ಬಿಜೆಪಿ ನಾಯಕರು ಸಾಕಷ್ಟು ಸಮಯದಿಂದ ಆರೋಪಿಸುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಇರಾನಿ ಅವರು ಮಾತುಗಳು ಮಹತ್ವ ಪಡೆದಿವೆ.

ಕುತೂಹಲಕಾರಿ ವಿಚಾರವೆಂದರೆ, ಕಾಂಗ್ರೆಸ್‌ ಪಕ್ಷದ ಟ್ರೇಡ್ ಯೂನಿಯನ್ ವಿಂಗ್ ಆದ ಐಎನ್‌ಟಿಯುಸಿಯ ಪ್ಲಾಟಿನಂ ಜುಬಿಲಿ ಆಚರಣೆಗಳನ್ನು ಉದ್ಘಾಟಿಸಲು ರಾಹುಲ್‌ ಗಾಂಧಿ ಅವರು ಸಹ ಮಂಗಳವಾರ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕೋವಲಂನಲ್ಲಿ ನಡೆಯುವ ಉದ್ಘಾಟನಾ ಅಧಿವೇಶನದಲ್ಲಿ 15,000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಐಎನ್‌ಟಿಯುಸಿ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರನ್ ತಿಳಿಸಿದ್ದಾರೆ.

Sneha Gowda

Recent Posts

ಭೀಕರ ಬರಗಾಲದಲ್ಲಿ ‘ಗ್ಯಾರಂಟಿ’ಗಳು ನೆರವಾಗಿವೆ

ರಾಜ್ಯದಲ್ಲಿರುವ ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಬಹಳ ನೆರವಾಗಿವೆ' ಎಂದು ನಟ-ನಿರ್ಮಾಪಕರೂ ಆದ ಕಾಂಗ್ರೆಸ್‌…

2 mins ago

ಅಶ್ಲೀಲ ವಿಡಿಯೋ​; ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ಆಗಮನ ಸಾಧ್ಯತೆ

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೆಚ್​ಡಿ ರೇವಣ್ಣ ಬಂಧನ ಬೆನ್ನಲ್ಲೇ ಪ್ರಜ್ವಲ್ ಬೇಟೆ ಕೂಡ…

10 mins ago

ಬೀದರ್‌ನಲ್ಲಿ ಪರಿಶಿಷ್ಟ ಮುಖಂಡ ಬಿಜೆಪಿ ಸೇರ್ಪಡೆ

ಔರಾದ್‌ ತಾಲ್ಲೂಕಿನ ವಡಗಾಂವ್‌ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪರಿಶಿಷ್ಟ ಜಾತಿಯ ಮುಖಂಡ ಬಾಬುರಾವ ಅಡಕೆ ಅವರು ನಗರದಲ್ಲಿ ಶನಿವಾರ ಬಿಜೆಪಿ…

25 mins ago

ಬೀದರ್‌ನಲ್ಲಿ ಸರಳ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಮೇ 10ರಂದು ಸರಳ ಹಾಗೂ ಸಾಂಕೇತಿಕವಾಗಿ…

36 mins ago

ಗುಮ್ಮಟ ನಗರಿಯಲ್ಲಿ ಕಣ್ಮನ ಸೆಳೆಯುವ ಶಿವಗಿರಿ

ಸಾಮಾನ್ಯವಾಗಿ ಶಿವನ ಮೂರ್ತಿಯನ್ನು ಎಲ್ಲ ಕಡೆ ಸ್ಥಾಪಿಸುತ್ತಾರೆ. ಆದರೆ ವಿಜಯಪುರದಲ್ಲಿನ ಶಿವಮೂರ್ತಿ ಒಂಚೂರು ವಿಭಿನ್ನವಾಗಿದ್ದು, ಇದೊಂದು ಪ್ರವಾಸಿ ಸ್ಥಳವಾಗಿದೆ

46 mins ago

ಉಮೇಶ ವಂದಾಲ ನೇತೃತ್ವದಲ್ಲಿ ಮನೆಮನೆ ಪ್ರಚಾರ

ಲೋಕಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ನಗರದ ವಾರ್ಡ್ ಸಂಖ್ಯೆ 3…

59 mins ago