Categories: ಕೇರಳ

ತರಗತಿಯಲ್ಲಿ ಗಲಾಟೆ ಮಾಡಿದ ವಿದ್ಯಾರ್ಥಿಗೆ ಪೆನ್​ ಎಸೆದ ಶಿಕ್ಷಕಿಗೆ 1 ವರ್ಷ ಜೈಲು, 3 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

ತಿರುವನಂತಪುರಂ: ತರಗತಿಯಲ್ಲಿ ಗಲಾಟೆ ಮಾಡಿದ ವಿದ್ಯಾರ್ಥಿಯ ಮೇಲೆ ಶಿಕ್ಷಕಿಯೊಬ್ಬರು ಪೆನ್​ ಎಸೆದಿದ್ದು, ಪೆನ್​ ನೇರವಾಗಿ ವಿದ್ಯಾರ್ಥಿಯ ಕಣ್ಣಿಗೆ ಬಿದ್ದು ದೃಷ್ಟಿ ದೋಷ ಕಳೆದುಕೊಂಡಿದ್ದಕ್ಕೆ ಶಿಕ್ಷಕಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ಕೇರಳದ ತಿರುವನಂತಪುರಂ ಪೊಕ್ಸೊ ನ್ಯಾಯಾಲಯ ಆದೇಶ ಹೊರಡಿಸಿದೆ.ಕಂದಾಲ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ತುಂಗಂಪರಾ ನಿವಾಸಿ ಶೆರಿಫ್​ ಶಹಜಹಾನ್​ ಎಂದು ಗುರುತಿಸಲಾಗಿದೆ.

ಪೊಕ್ಸೊ ಕೋರ್ಟ್​ ಜಡ್ಜ್​ ಕೆ.ವಿ. ರಾಜನೀಶ್​ ತೀರ್ಪು ಪ್ರಕಟಿಸಿದ್ದು, ಶಿಕ್ಷಕಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ಮೂರು ಲಕ್ಷ ರೂ. ದಂಡ ವಿಧಿಸಿದೆ. ಒಂದು ದಂಡ ಕೊಡದೇ ಹೋದರೆ, ಹೆಚ್ಚುವರಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಅರೆಬಿಕ್​ ಕ್ಲಾಸ್​ ತೆಗೆದುಕೊಂಡಿದ್ದ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತರೊಂದಿಗೆ ಮಾತನಾಡುವುದನ್ನು ಶಿಕ್ಷಕಿ ಗಮನಿಸಿದ್ದರು. ತರಗತಿಗೆ ತೊಂದರೆಯಾಗಿದ್ದರಿಂದ ಬಾಲ್​ ಪೆನ್​ ಅನ್ನು ವಿದ್ಯಾರ್ಥಿಯ ಮೇಲೆ ಎಸೆದಿದ್ದರು. ಪೇನ್​ ನೇರವಾಗಿ 8 ವರ್ಷದ ವಿದ್ಯಾರ್ಥಿಯ ಕಣ್ಣಿಗೆ ಚುಚ್ಚಿಕೊಂಡಿತ್ತು. ಇದರಿಂದಾಗಿ ವಿದ್ಯಾರ್ಥಿ ತನ್ನ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ.

Swathi MG

Recent Posts

ಮಹಿಳೆಯರಿಗೆ ಉಜ್ವಲ ಯೋಜನೆ ಗ್ಯಾಸ್ ಬದಲಾಗಿ ಪ್ರಜ್ವಲ ಯೋಜನೆ : ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಮಹಿಳೆಯರಿಗೆ ಉಜ್ವಲ ಯೋಜನೆ ಗ್ಯಾಸ್ ಬದಲಾಗಿದೆ ಪ್ರಜ್ವಲ ಯೋಜನೆ ಸಿಕ್ಕಿದೆ ಎಂದು ಪ್ರಜ್ವಲ ರೇವಣ್ಣ…

16 mins ago

ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ

ಪಿಹೆಚ್‌ಡಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನಡೆದಿದೆ.

35 mins ago

ಹಿಂದೂ ವಿವಾಹ ಶಾಸ್ತ್ರಬದ್ಧವಾಗಿ ನಡೆಯದೇ ಇದ್ದಲ್ಲಿ ಅದಕ್ಕೆ ಮಾನ್ಯತೆ ಇಲ್ಲ: ಸುಪ್ರೀಂ

ಹಿಂದೂ ವಿವಾಹ ಶಾಸ್ತ್ರಬದ್ಧವಾಗಿ ನಡೆಯದೇ ಇದ್ದಲ್ಲಿ ಅದಕ್ಕೆ ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ.

51 mins ago

ನೇಹಾ ಕುಟುಂಬವನ್ನು ಭೇಟಿಯಾದ ಅಮಿತ್​​ ಶಾ: ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ

ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹತ್ಯೆಗೀಡಾದ ನೇಹಾ ಕುಟುಂಬವನ್ನು ನಿನ್ನೆ ಅಮಿತ್​​ ಶಾ ಅವರು ಭೇಟಿ ಮಾಡಿ ಸಾಂತ್ವಾನ ತಿಳಿಸಿದರು. ಅವರು…

1 hour ago

ತಾಪಮಾನ ಏರಿಕೆ: ದೇಹಕ್ಕೆ ಪ್ರತಿದಿನ 2-3 ಲೀಟರ್​ ನೀರು ಅತ್ಯಗತ್ಯ

ಸುಡೋ ಬಿಸಿಲಿಗೆ ಜನ ತತ್ತಿರಿಸಿ ಹೋಗಿದ್ದು, ಮನೆಯಿಂದ ಹೊರಗೆ ಕಾಲಿಡಲು ಹೆದರುವಂತಾಗಿದೆ. ಈ ಬಾರಿ ಪ್ರತಿವರ್ಷಕ್ಕಿಂತ ಹೆಚ್ಚಾಗಿ ಬಿಸಿಲಿದೆ. ಈ…

2 hours ago

ಚಿನ್ನದ ಬೆಲೆಯಲ್ಲಿ ಇಳಿಕೆ : ಇಂದಿನ ಚಿನ್ನ ಬೆಳ್ಳಿ ದರ ಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಅಸ್ವಾಭಾವಿಕವಾಗಿ ಏರಿಕೆ ಕಂಡಿದ್ದು, ಇದೀಗ ಕೊಂಚ ಇಳಿಕೆಯಾಗಿದೆ. ಇಂದು ಗುರುವಾರ ಚಿನ್ನದ ಬೆಲೆ ಗ್ರಾಮ್​ಗೆ…

2 hours ago