Categories: ಕೇರಳ

ಕೇರಳ: ಕೊರೋನಾ ತೀವ್ರ ಹೆಚ್ಚಳ ಹಿನ್ನೆಲೆ ‘ಸ್ಮಾರ್ಟ್ ಲಾಕ್‌ಡೌನ್’ ಯೋಜನೆ

ಕೇರಳ :  ಕೇರಳದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು “ಸ್ಮಾರ್ಟ್ ಮತ್ತು ಯೋಜಿತ ಲಾಕ್‌ಡೌನ್” ಒಂದರ ಅಗತ್ಯವಿದೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಜ್ಞರ ಅಭಿಮತವನ್ನುಲ್ಲೇಖಿಸಿ ತಿಳಿಸಿವೆ.

ದೇಶದ ಒಟ್ಟಾರೆ ಕೋವಿಡ್ ಪ್ರಕರಣಗಳಲ್ಲಿ ಬಹುತೇಕ ಕೇರಳದಲ್ಲೇ ವರದಿಯಾಗುತ್ತಿವೆ. ರಾಜ್ಯದ ಶೇ.೮೫ಮಂದಿ ಸೋಂಕಿತರು ಮನೆಗಳಲ್ಲೇ ಇದ್ದು, ಅನೇಕರು ನಿಯಂತ್ರಣವಿಲ್ಲದೆ ಬೇಕಾಬಿಟ್ಟಿ ತಿರುಗಾಡುತ್ತಿರುವುದು ಮತ್ತು ಹಬ್ಬದ ಋತುವಿನಲ್ಲಿ ಯಾವುದೇ ನಿಯಮಗಳ ಪಾಲನೆಯಾಗದ ಕಾರಣ ಸೋಂಕು ವ್ಯಾಪಕಗೊಳ್ಳುತ್ತಿದೆ. ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರವು ಕೇಂದ್ರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದೆ ಇರುವುದರಿಂದ ಈಗ ಕೇರಳ ಮಾತ್ರವಲ್ಲದೆ, ಕೇರಳದ ನೆರೆಯ ರಾಜ್ಯಗಳಿಗೂ ತೀವ್ರ ಸಂಕಷ್ಟ ಎದುರಾಗಿದೆ ಎಂದು ಮೂಲಗಳು ಬೊಟ್ಟು ಮಾಡುತ್ತವೆ.

ದೇಶದಲ್ಲೇ ಅತ್ಯಕ ಪ್ರಕರಣಗಳು ಈಗ ಕೇರಳದಲ್ಲಿ ವರದಿಯಾಗುತ್ತಿದ್ದು,ಅಲ್ಲಿ ಈಗ ಮಾಡುತ್ತಿರುವಂತೆ ನಿಯಂತ್ರಣ ಕ್ರಮಗಳನ್ನು ಜಿಲ್ಲಾ ಮಟ್ಟಕ್ಕೆ ಸೀಮಿತಗೊಳಿಸದೆ ಮೈಕ್ರೋ ಕಂಟೈನ್‌ಮೆಂಟ್ ವಲಯಗಳ ರಚನೆ ಮೂಲಕ ತಳಮಟ್ಟದಲ್ಲಿ ಕೈಗೊಳ್ಳಬೇಕು . ಇಲ್ಲವಾದರೆ ಇದರಿಂದ ನೆರೆಯ ರಾಜ್ಯಗಳಿಗೂ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ . ಸೋಂಕಿತರು ಚೇತರಿಸಿಕೊಂಡ ಬಳಿಕವೂ ಕೋವಿಡ್ ಸುರಕ್ಷಾ ನಿಯಮಗಳನ್ನು ಪಾಲಿಸುತ್ತಿಲ್ಲ . ಇದರಿಂದಾಗಿ ಕೋವಿಡ್ ನಿಯಂತ್ರಣ ಬರುತ್ತಿಲ್ಲ ಎಂದು ಅವರು ಹೇಳಿವೆ. ಕೇರಳದಲ್ಲಿನ್ನೂ ಪಾಸಿಟಿವಿಟಿ ದರ ಶೇ.೧೪-೧೯ರ ಗಂಭೀರ ಮಟ್ಟದಲ್ಲಿದ್ದು, ದಿನನಿತ್ಯ ೩೦ಸಾವಿರಕ್ಕೂ ಅಕ ಪ್ರಕರಣಗಳು ವರದಿಯಾಗುತ್ತಿವೆ.ದೇಶದ ಒಟ್ಟು ಪ್ರಕರಣಗಳು ೪೧,೯೬೫ ಆಗಿರುವಾಗ ಕೇರಳದ ಪ್ರಕರಣಗಳು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿತೋರುತ್ತಿವೆ. ಈಗಾಗಲೇ ಒಟ್ಟು ಪ್ರಕರಣಗಳ ಸಂಖ್ಯೆ ೪೦ಲಕ್ಷ ದಾಟಿದ್ದು, ೨೦ಸಾವಿರಕ್ಕೂ ಅಕ ಮಂದಿ ಬಲಿಯಾಗಿದ್ದಾರೆ.

ಈಗಾಗಲೇ ಕರ್ನಾಟಕ ಕೇರಳದಿಂದ ಬಂದವರಿಗೆ ೭ದಿನಗಳ ಸಾಂಸ್ಥಿಕ ಕ್ವಾರಂಟೈನ್ ಘೋಷಿಸಿದೆ.ತಮಿಳ್ನಾಡು ಕೂಡಾ ಕೇರಳದಿಂದ ಬರುವವರಿಗೆ ನಿರ್ಬಂಧಗಳನ್ನು ವಿಸಿದೆ .ಆರಂಭದಲ್ಲಿ ಬಕ್ರೀದ್ ಆಚರಣೆಗೆಂದು ನಾಲ್ಕು ದಿನಗಳ ಕಾಲ ಮುಕ್ತ ಅವಕಾಶ ನೀಡಿದ್ದ ಕೇರಳ ಸರಕಾರ ಅನಂತರ ನಿರ್ಬಂಧಗಳನ್ನು ಘೋಷಿಸಿದರೂ ಅವುಗಳ ಸೂಕ್ತ ಪಾಲನೆ ಮಾಡದೆ ಇರುವುದು ಸಮಸ್ಯೆ ಬಿಗಡಾಯಿಸಲು ಕಾರಣ ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Sneha Gowda

Recent Posts

ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಚಿಕನ್​​ ಶವರ್ಮಾ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, 19 ವರ್ಷದ ಯುವಕನೊಬ್ಬ ಚಿಕನ್ ಶವರ್ಮಾ…

20 mins ago

ಮೇ 11ರಿಂದ 13ರವರೆಗೆ ವಾಮಂಜೂರಿನಲ್ಲಿ ಕೃಷಿ ಮೇಳ, ದಶಮ ಸಂಭ್ರಮ

ಇದೇ ಮೇ 11ರಿಂದ 13ರವರೆಗೆ ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ಜರುಗಲಿದೆ ಎಂದು ಗುರುಪುರ ವ್ಯವಸಾಯ ಸೇವಾ ಸಹಕಾರಿ…

22 mins ago

ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂನಿಂದ ವಾಟ್ಸಾಪ್ ನಂಬರ್ ಬಿಡುಗಡೆ

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂ ಎಂಟು ಜಿಲ್ಲೆಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದ್ದು, ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಜನರು…

36 mins ago

ಎಸ್‌ಎಸ್‌ಎಲ್‌ಸಿ 2,3ನೇ ಪರೀಕ್ಷೆ ಬರೆಯುವವರಿಗೆ ಸ್ಪೆಷಲ್‌ ಕ್ಲಾಸ್‌ ಯೋಜನೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

39 mins ago

ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ ಪ್ರಭು ಚವಾಣ್

ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ…

53 mins ago

ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ ಕೇಸ್‌ : ಇಬ್ಬರ ಬಂಧನ

ಶಾಸಕ ಇಕ್ಬಾಲ್‌ ಹಸೇನ್‌ ಅವರು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್‌ ಮಾಡಿದ್ದ ಆರೋಪದಡಿ…

55 mins ago