News Karnataka Kannada
Thursday, May 02 2024
ಕೇರಳ

ಒಳ ಉಡುಪಿನಲ್ಲಿ ಇಟ್ಟು ಚಿನ್ನ ಸಾಗಾಟ: ದಂಪತಿ ಬಂಧನ

Untitled 146
Photo Credit :

ಕೇರಳ : ಕೋಝಿಕ್ಕೋಡ್‌ನ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಲಾಕಿ ದಂಪತಿಯನ್ನು ತಪಾಸಣೆ ಮಾಡಿರುವ ಕಸ್ಟಮ್ಸ್​ ಅಧಿಕಾರಿಗಳು ಬರೋಬ್ಬರಿ 7 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ. ಒಳ ಉಡುಪು ಮತ್ತು ಗುದದ್ವಾರದಲ್ಲಿ ಚಿನ್ನವನ್ನಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಕಸ್ಟಮ್ಸ್​​ ಅಧಿಕಾರಿಗಳು ಇವರ ಕಳ್ಳಾಟವನ್ನು ಬಯಲು ಮಾಡಿದ್ದಾರೆ.

ಒಳ ಉಡುಪಿನಲ್ಲಿಟ್ಟು ಗೋಲ್ಡ್ ಸ್ಮಗ್ಲಿಂಗ್ ಮಾಡ್ತಿದ್ದ ದಂಪತಿ ಅಮ್ಮಿನಿಕ್ಕಾಡ್​ದ ನಿವಾಸಿಗಳಾದ ಅಬ್ದುಲ್ ಸಮದ್ ಮತ್ತು ಪತ್ನಿ ಸಫ್ನಾ ಬಂಧಿತ ಆರೋಪಗಳಾಗಿದ್ದು, ಸಫ್ನಾ ಐದು ತಿಂಗಳ ಗರ್ಭಿಣಿ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿಕಿತ್ಸೆಗಾಗಿ ತಾವು ತೆರಳುತ್ತಿರುವುದಾಗಿ ಹೇಳಿ ಅಧಿಕಾರಿಗಳನ್ನ ಯಾಮಾರಿಸಬಹುದು ಎಂಬ ಕಾರಣದಿಂದ ಇವರು ಇಷ್ಟೊಂದು ಚಿನ್ನವನ್ನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಳೆದ ಮಂಗಳವಾರ ಸಹ ಕಸ್ಟಮ್ಸ್​ ಅಧಿಕಾರಿಗಳು 6.26 ಕೆಜಿ ಚಿನ್ನವನ್ನ ವಶಕ್ಕೆ ಪಡೆದುಕೊಂಡಿದ್ದರು.ಏಪ್ರಿಲ್ ತಿಂಗಳ ಆರಂಭದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದ್ದ ಕಸ್ಟಮ್ಸ್​ ಅಧಿಕಾರಿಗಳು 1.5 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಮೂವರು ಪ್ರಯಾಣಿಕರನ್ನ ಬಂಧಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು